More

  ಹಿರಿಯೂರಲ್ಲಿ ಕೋಟ್ಯಂತರ ರೂ.ಮೌಲ್ಯದ ಐದು ಕೆಜಿ ಚಿನ್ನ ವಶ

  ಚಿತ್ರದುರ್ಗ: ಸೂಕ್ತ ದಾಖಲೆಗಳಿಲ್ಲದ ಅಂದಾಜು 3.55 ಕೋಟಿ ರೂ.ಮೌಲ್ಯದ 5.250 ಕೆ.ಜಿ.ಚಿನ್ನವನ್ನು ಬುಧವಾರ ರಾತ್ರಿ ಹಿರಿಯೂರು ನಗರ ದಲ್ಲಿ ವಶಪಡಿಸಿಕೊಳ್ಳಲಾಗಿದೆ.
  ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್‌ರಾಜೇಶ್,ಸಿಪಿಐ ರಾಘವೇಂದ್ರ ಹಾಗೂ ಎಫ್‌ಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿ ಜುವೆಲ್ಲರಿ ಶಾಫ್‌ಗಳಿಗೆ ಕೊಡಲು ವ್ಯಕ್ತಿಯೊಬ್ಬರು ತಂದಿದ್ದ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಬಂಗಾರ ತಂದಿದ್ದ ವ್ಯಕ್ತಿ ಬಳಿ ಅದಕ್ಕೆ ಸಮರ್ಪಕ ದಾಖಲೆಗಳಿರದ ಕಾರಣಕ್ಕೆ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ. ಈ ಬಂಗಾರ ದಾವಣಗೆರೆ ಜುವೆಲ್ಲರಿ ಶಾಫ್‌ಗೆ ಸೇರಿದ್ದೆನ್ನಲಾಗಿದೆ. ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts