ಸಮಾರೋಪ ಎಂದರೆ ಮುಕ್ತಾಯವಲ್ಲ, ಅಲ್ಲಿಂದಲೇ ಬದುಕಿನ ಹೊಸ ಅಧ್ಯಾಯದ ಆರಂಭ: ಜಿ.ಎಂ. ಲಿಂಗರಾಜು

ದಾವಣಗೆರೆ: ಸಮಾರೋಪ ಎಂದರೆ ಇಲ್ಲಿಗೆ ಎಲ್ಲ ಮುಗಿಯಿತು ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಈ ಸಂಸ್ಥೆಯ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ ಎಂದು ಶ್ರೀಶೈಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಎಂ. ಲಿಂಗರಾಜು ಹೇಳಿದರು.

ನಗರದ ಜಿಎಂ ತಾಂತ್ರಿಕ ವಿದ್ಯಾಲಯದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪಿರಾಮಿಡ್ ವೇದಿಕೆ ಸಮಾರೋಪ, ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದೀರಿ. ಆ ಮಾರ್ಗದಲ್ಲಿ ನಿಮಗೆ ವಿಭಿನ್ನ ಅನುಭವಗಳು ಆಗಲಿವೆ. ಇವುಗಳನ್ನು ನಿಮ್ಮ ಕಿರಿಯ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಎಂದರು.

ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್. ಗೋವರ್ಧನಸ್ವಾಮಿ ಮಾತನಾಡಿ, ಹೊರಹೋಗುತ್ತಿರುವ ಎಲ್ಲ ವಿದ್ಯಾರ್ಥಿಗಳು ಕಿರಿಯ ಗೆಳೆಯರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಮತ್ತು ವೃತ್ತಿಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು. ವಿದ್ಯಾರ್ಥಿಗಳು ಕಾಲೇಜಿನ ಸವಿನೆನಪುಗಳನ್ನು ಹಂಚಿಕೊಂಡರು.

ಪ್ರಾಂಶುಪಾಲ ಡಾ. ಪಿ. ಪ್ರಕಾಶ್, ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ಉಪಪ್ರಾಂಶುಪಾಲ ಡಾ. ಬಿ.ಆರ್. ಶ್ರೀಧರ್, ರಂಗಕರ್ಮಿ ಆರ್.ಟಿ. ಅರುಣ್‌ಕುಮಾರ್, ಸಹ ಪ್ರಾಧ್ಯಾಪಕ ಸಿ.ಎಂ. ಕಿರಣ್‌ಕುಮಾರ್, ವೇದಿಕೆಯ ವಿದ್ಯಾರ್ಥಿ ಸಂಯೋಜಕ ಶಿವಶಂಕರಗೌಡ ಮಾಲಿಪಾಟೀಲ್ ಇತರರಿದ್ದರು.

Leave a Reply

Your email address will not be published. Required fields are marked *