ಹಿಂದೂ ಧರ್ಮ ವಿಶ್ವಕ್ಕೆ ಪರಿಚಯಿಸಿದ ಶ್ರೇಷ್ಠ ಸಂತ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾರತ ವಿಶ್ವಗುರು ಆಗಬೇಕೆಂದು ಕನಸು ಕಂಡಿದ್ದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಂತ ಎಂದು ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ ಹೇಳಿದರು.
ನಗರದ ರಾಜಾಪುರ ಬಡಾವಣೆಯ ರಾಮಕೃಷ್ಣ ಆಶ್ರಮದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಿಸ್ವಾರ್ಥ ಸೇವೆ ಹೇಗೆ ಮಾಡಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೆ ಕಲಿಸಿಕೊಟ್ಟಿದ್ದಾರೆ.
ದೇಶದ ವೇದ, ಉಪನಿಷತ್, ಮಹಾಭಾರತ, ರಾಮಾಯಣ, ಭಗವದ್ಗೀತೆಗಳ ಶ್ರೇಷ್ಠ ಗ್ರಂಥಗಳ ಮೂಲ ಉದ್ದೇಶವನ್ನು ವಿವೇಕಾನಂದರು ವಿದೇಶಗಳಲ್ಲಿ ಸಾರುವ ಮೂಲಕ ನಮ್ಮ ದೇಶದ ಶ್ರೇಷ್ಠತೆ ಹೆಚ್ಚಿಸಿದ್ದಾರೆ. ಅಂತ ಮಹಾತ್ಮರಿಗೆ ಜನ್ಮ ನೀಡಿದ ಭಾರತ ಮಾತೆ ಧನ್ಯಳು ಎಂದರು.
ರಾಮಕೃಷ್ಣ ಆಶ್ರಮದ ಶ್ರೀ ಮಹೇಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಹಿಂದೂ ಧರ್ಮ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಮತ್ತೊಮ್ಮೆ ವಿಶ್ವಗುರುವಾಗಬೇಕು ಎಂಬ ಬಹುದೊಡ್ಡ ಕನಸು ಕಂಡಿದ್ದರು. ಯುವಕರು ಅವರ ಕನಸು ನನಸು ಮಾಡಲು ಪ್ರಯತ್ನಿಸಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಭೀಮರಾವ ನಾಂದ್ರೆ, ನ್ಯಾಯವಾದಿ ಗೌರೀಶ ಕಾಶಂಪನವರ, ಡಾ.ಶಿವರಾಮೇಗೌಡ, ಡಾ.ಶಂಭುಲಿಂಗಪ್ಪ, ಮಲ್ಲಿನಾಥ ಬುಡ್ಡ ಇದ್ದರು.
ಗಮನ ಸೆಳೆದ ಯುವ ವಿವೇಕಾನಂದ: ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಅಮೇರಿಕದ ಆತ್ಮ ಗೆದ್ದಂತೆ. ಪುಟ್ಟ ಬಾಲಕರು ವಿವೇಕಾನಂದರ ವೇಷ ಭೂಷಣ ಧರಿಸಿ ವೇದಿಕೆ ಮೇಲೆ ಬಂದು ಸಿಸ್ಟರ್ ಆ್ಯಂಡ್ ಬ್ರದರ್ಸ್ ಇನ್ ಅಮೇರಿಕಾ ಎಂದು ಹೇಳುತ್ತಿದ್ದಂತೆ ನೆರೆದ ಸಭಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಆಕರ್ಷಿಸಿದ ಮೆರವಣಿಗೆ
: ಜಿಲ್ಲಾಧಿಕಾರಿ ಕಚೇರಿಯಿಂದ ಕಾರ್ಯಕ್ರಮ ಜರುಗಿದ ರಾಮಕೃಷ್ಣ ವಿವೇಕಾನಂದ ಆಶ್ರಮದವರೆಗೆ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *