ಹಿಂದುಳಿದ ವರ್ಗದ ಏಳ್ಗೆಯ ಶ್ರಮಿಕ

ರಟ್ಟಿಹಳ್ಳಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಸಾಧನೆ ಸ್ಮರಣೀಯವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಟಿ.ಎಂ. ಭಾಸ್ಕರ ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ದಿ.ದೇವರಾಜ ಅರಸು ಜನ್ಮ ದಿನಾಚರಣೆ ಹಾಗೂ 2019-20ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯ ಸಮಾರಂಭದಲ್ಲಿ ಒಕ್ಕೂಟದ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಸಾಲಿ, ದೇಶಕಂಡ ಅಪರೂಪದ ರಾಜಕಾರಣಿಯಾಗಿದ್ದ ಅರಸು ಅವರು ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಎಲ್ಲ ಜನರಿಗೂ ನ್ಯಾಯವನ್ನು ಒದಗಿಸಿದ ನಾಯಕರಾಗಿದ್ದರು ಎಂದರು.

ಸನ್ಮಾನ: ತಾಲೂಕಿನ ವಿವಿಧ ಸಮಾಜದ ಮುಖಂಡರನ್ನು ಹಾಗೂ ಕನ್ನಡ ಕೋಗಿಲೆಯ ಸೀಜನ್ 2 ರ ವಿಜೇತ ಖಾಸಿಂ ಅಲಿ ಹಾಗೂ ರಾಜ್ಯ ಸಂಗೀತ ಪ್ರಶಸ್ತಿ ಪುರಸ್ಕೃತ ಮಂಜುನಾಥ ವಾಲ್ಮೀಕಿ ಅವರನ್ನು ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಜಿ.ಪಂ. ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ಜಯಣ್ಣ ಪೂಜಾರ, ಸಾಹಿತಿ ನಿಂಗಪ್ಪ ಚಳಗೇರಿ, ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಗ್ರಾ.ಪಂ. ಸದಸ್ಯ ದೇವರಾಜ ನಾಗಣ್ಣನವರ, ಯು.ಎಂ. ಸಾಲಿ, ಸುಭಾಷ ಹದಡೇರ, ಕೃಷ್ಣಪ್ಪ ಬಾಜಿರಾಯರ, ಮಹದೇವಪ್ಪ ಮಾಳಮ್ಮನವರ,

ಸುಧಾ ಹಿತ್ತಲಮನಿ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ಬಿ.ಸಿ. ತಿಮ್ಮೇನಹಳ್ಳಿ, ರಮೇಶ ಕಮತಹಳ್ಳಿ ನಿರ್ವಹಿಸಿದರು.

Leave a Reply

Your email address will not be published. Required fields are marked *