ಹಿಂದುಗಳ ಭಾವನೆಗೆ ಧಕ್ಕೆ ಸಲ್ಲ

ದೊಡ್ಡಬಳ್ಳಾಪುರ: ಪದೇ ಪದೆ ಹಿಂದುಗಳ ಧಾರ್ವಿುಕ ಭಾವನೆಗೆ ಧಕ್ಕೆ ತಂದು ಸಮಾಜದ ಶಾಂತಿ ಕದಡುತ್ತಿರುವ ಪ್ರೊ.ಕೆ.ಎಸ್. ಭಗವಾನ್​ಅವರನ್ನು ಬಂಧಿಸದೆ ರಕ್ಷಣೆ ನೀಡುತ್ತಿರುವ ರಾಜ್ಯ ಸರ್ಕಾರ ಹಿಂದುಗಳ ತಾಳ್ಮೆ ಕೆಣಕುತ್ತಿದೆ ಎಂದು ಬಿಜೆಪಿ ಮುಖಂಡ ರಾಮ್ ಕೃಷ್ಣ ಅಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮನ ವಿರುದ್ಧ ಅವಹೇಳನಕಾರಿ ಪುಸ್ತಕ ಬರೆದಿರುವ ಕೆ.ಎಸ್.ಭಗವಾನ್ ಬಂಧನಕ್ಕೆ ಒತ್ತಾಯಿಸಿ ತಾಲೂಕು ಕಚೇರಿ ಆವರಣದಲ್ಲಿ ಶ್ರೀರಾಮ ಭಕ್ತರು ಹಾಗೂ ವಿವಿಧ ಹಿಂದುಪರ ಸಂಘಟನೆ ಪದಾಧಿಕಾರಿಗಳು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬುದ್ಧಿಜೀವಿ ಎಂಬ ಹೆಸರಿನಲ್ಲಿ ಭಗವಾನ್, ಕೋಟ್ಯಂತರ ಹಿಂದುಗಳು ನಂಬುವ ಶ್ರೀರಾಮನ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದರೂ ಪೊಲೀಸ್ ಇಲಾಖೆ ಬಂಧಿಸುತ್ತಿಲ್ಲ. ಇದಕ್ಕೆ ಪ್ರತಿಯಾಗಿ ಜನಸಾಮಾನ್ಯರ ತೆರಿಗೆಯ ಲಕ್ಷಾಂತರ ಹಣ ವೆಚ್ಚಮಾಡಿ ಹಿಂದು ಭಾವನೆಗೆ ಧಕ್ಕೆ ತಂದಿದ್ದಕ್ಕೆ ಬಳುವಳಿ

ಎಂಬಂತೆ ಆತನಿಗೆ ರಕ್ಷಣೆ ನೀಡಲಾಗುತ್ತಿದೆ

ಎಂದು ಲೇವಡಿ ಮಾಡಿದರು.

ಅನ್ಯ ಧರ್ವಿುಯರ ಭಾವನೆಗೆ ಧಕೆ್ಕೆ ಉಂಟಾದಾಗ ರಾತ್ರೋರಾತ್ರಿ ಬಂಧನ ಮಾಡುತ್ತಾರೆ. ಇದು ಸರ್ಕಾರದ ಹಿಂದು ವಿರೋಧಿ ನೀತಿಯಾಗಿದೆ. ಹಿಂದುಗಳು ಶಾಂತಿ ಪ್ರಿಯರೇ ಹೊರತು ಕೈಲಾಗದವರಲ್ಲ ಎಂಬುದನ್ನು ಅರಿತು ಭಗವಾನ್ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿ ರಮೇಶ್ ಮಾತನಾಡಿ, ಹಿಂದುಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಭಗವಾನ್ ಅವರಂತಹ ಹಲವರು ಬುದ್ಧಿಜೀವಿಗಳ ಹೆಸರಿನಲ್ಲಿ ತಂಡ ಕಟ್ಟಿಕೊಂಡಿದ್ದಾರೆ. ಅವರ ಉದ್ದೇಶ ಹಿಂದುಗಳ ದೇವರನ್ನು ನಿಂದಿಸುವುದು ಹಾಗೂ ಅಲ್ಪಸಂಖ್ಯಾತರರನ್ನು ಒಲೈಸಿ ಪ್ರಶಸ್ತಿ ಪಡೆಯುವುದಾಗಿದೆ ಎಂದರು.

ಘಾಟಿ ಗೋಶಾಲಾ ಪ್ರಮುಖ್ ಜೀವನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಕಮಲಾ ಶ್ರೀನಿವಾಸ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ, ಮುಖಂಡರಾದ ಲೀಲಾಮಹೇಶ್, ಶಿವಶಂಕರ್, ನಮೋ ಸೇನೆ, ಹಿಂದು ಜಾಗರಣಾ ವೇದಿಕೆ, ಬಜರಂಗದಳ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ಮುಖಂಡರು ಹಾಜರಿದ್ದರು.