ವಿಜಯವಾಣಿ ಸುದ್ದಿಜಾಲ ಮೈಸೂರು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಏನೂ ಇಲ್ಲ. ಹಿಂದಿ ರಾಷ್ಟ್ರ ಭಾಷೆಯೂ ಅಲ್ಲ. ಕನ್ನಡದಂತೆ ಅದು ಸಹ ಒಂದು ಭಾಷೆ ಎಂದರು. ಹಿಂದಿ ಕಲಿಯಲು ನಮ್ಮ ವಿರೋಧವಿಲ್ಲ. ಹಿಂದಿಯನ್ನು ಸ್ವಯಂ ಪ್ರೇರಣೆಯಿಂದ ಕಲಿಯಬೇಕು. ಆದರೆ, ಬಲವಂತವಾಗಿ ಹೇರಬಾರದು. ಕೇಂದ್ರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು. ಐಬಿಪಿಎಸ್ ಪರೀಕ್ಷೆ ಬೇರೆ ಭಾಷೆಯಲ್ಲಿ ಮಾಡುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಆಗಬೇಕು ಎಂದರು. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ವಿಳಂಬ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೆರೆ ಸಂತ್ರಸ್ತರ ಕಷ್ಟಕ್ಕೆ ಬಾರದ ಇಂತಹ ಕೇಂದ್ರ ಸರ್ಕಾರ ಇದ್ದರೆಷ್ಟು ಹೋದರೆಷ್ಟು. ಕೇಂದ್ರದವರು ಪರಿಹಾರವನ್ನು ಧರ್ಮಕ್ಕೆ ಕೊಡ್ತಾರಾ. ಇದು ಸಿಹಿ ಸುದ್ದಿಯಲ್ಲ. ಇದನ್ನು ನೀವೂ ಟೀಕೆ ಮಾಡಬೇಕು ಎಂದು ಮಾಧ್ಯಮದವರಿಗೆ ತಿಳಿಸಿದರು. ಅವರ ಪಕ್ಷದ ಶಾಸಕರೇ ಸತ್ಯ ಹೇಳುತ್ತಿದ್ದಾರೆ! ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಜಿ.ಟಿ.ದೇವೇಗೌಡರು ಸತ್ಯ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾನು ಹೇಳುತ್ತಿದ್ದೇನೆ. ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದರು. ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏನಾದ್ರೂ ಹೇಳಿದ್ರೆ ರಾಜಕೀಯದ ಬಣ್ಣ ಕೊಡುತ್ತಾರೆ. ಈಗ ಅವರ ಪಕ್ಷದ ಶಾಸಕರೇ ಸರ್ಕಾರ ಬೀಳಲು ಕಾರಣ ಏನೆಂಬ ಸತ್ಯವನ್ನು ಹೇಳುತ್ತಿದ್ದಾರೆ. ಬೇರೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಲ್ಲ. ನಾನು ಜೆಡಿಎಸ್ ಬಿಟ್ಟು 15 ವರ್ಷ ಆಗಿದೆ. ನಾನೇ ಜೆಡಿಎಸ್‌ನಿಂದ ಹೊರ ಬರಲಿಲ್ಲ. ನನ್ನನ್ನು ಪಕ್ಷದಿಂದ ಹೊರ ಹಾಕಿದ್ರು ಎಂದರು.

ಹಿಂದಿ ಭಾಷೆ ಬಲವಂತ ಹೇರಿಕೆ ಯತ್ನ

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಏನೂ ಇಲ್ಲ. ಹಿಂದಿ ರಾಷ್ಟ್ರ ಭಾಷೆಯೂ ಅಲ್ಲ. ಕನ್ನಡದಂತೆ ಅದು ಸಹ ಒಂದು ಭಾಷೆ ಎಂದರು. ಹಿಂದಿ ಕಲಿಯಲು ನಮ್ಮ ವಿರೋಧವಿಲ್ಲ. ಹಿಂದಿಯನ್ನು ಸ್ವಯಂ ಪ್ರೇರಣೆಯಿಂದ ಕಲಿಯಬೇಕು. ಆದರೆ, ಬಲವಂತವಾಗಿ ಹೇರಬಾರದು. ಕೇಂದ್ರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು. ಐಬಿಪಿಎಸ್ ಪರೀಕ್ಷೆ ಬೇರೆ ಭಾಷೆಯಲ್ಲಿ ಮಾಡುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಆಗಬೇಕು ಎಂದರು. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ವಿಳಂಬ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೆರೆ ಸಂತ್ರಸ್ತರ ಕಷ್ಟಕ್ಕೆ ಬಾರದ ಇಂತಹ ಕೇಂದ್ರ ಸರ್ಕಾರ ಇದ್ದರೆಷ್ಟು ಹೋದರೆಷ್ಟು. ಕೇಂದ್ರದವರು ಪರಿಹಾರವನ್ನು ಧರ್ಮಕ್ಕೆ ಕೊಡ್ತಾರಾ. ಇದು ಸಿಹಿ ಸುದ್ದಿಯಲ್ಲ. ಇದನ್ನು ನೀವೂ ಟೀಕೆ ಮಾಡಬೇಕು ಎಂದು ಮಾಧ್ಯಮದವರಿಗೆ ತಿಳಿಸಿದರು.

ಅವರ ಪಕ್ಷದ ಶಾಸಕರೇ ಸತ್ಯ ಹೇಳುತ್ತಿದ್ದಾರೆ! ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಜಿ.ಟಿ.ದೇವೇಗೌಡರು ಸತ್ಯ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾನು ಹೇಳುತ್ತಿದ್ದೇನೆ. ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದರು. ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏನಾದ್ರೂ ಹೇಳಿದ್ರೆ ರಾಜಕೀಯದ ಬಣ್ಣ ಕೊಡುತ್ತಾರೆ. ಈಗ ಅವರ ಪಕ್ಷದ ಶಾಸಕರೇ ಸರ್ಕಾರ ಬೀಳಲು ಕಾರಣ ಏನೆಂಬ ಸತ್ಯವನ್ನು ಹೇಳುತ್ತಿದ್ದಾರೆ. ಬೇರೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಲ್ಲ. ನಾನು ಜೆಡಿಎಸ್ ಬಿಟ್ಟು 15 ವರ್ಷ ಆಗಿದೆ. ನಾನೇ ಜೆಡಿಎಸ್‌ನಿಂದ ಹೊರ ಬರಲಿಲ್ಲ. ನನ್ನನ್ನು ಪಕ್ಷದಿಂದ ಹೊರ ಹಾಕಿದ್ರು ಎಂದರು.

Leave a Reply

Your email address will not be published. Required fields are marked *