ಹಾಸ್ಟೆಲ್ ಛಾವಣಿಯಲ್ಲಿ ಸೌರಶಕ್ತಿ ಉತ್ಪಾದನೆ

ಬೆಂಗಳೂರು: ಒಳಾಂಗಣ ಕ್ರೀಡಾಂಗಣ, ಪಾರ್ಟಿ ಹಾಲ್, ಸಭಾಂಗಣ, ವಿದ್ಯಾರ್ಥಿನಿಲಯ ಹೀಗೆ ಬಹುತೇಕ ಕಟ್ಟಡಗಳ ಮೇಲ್ಛಾವಣಿಯಲ್ಲಿ ಬಹಳಷ್ಟು ಜಾಗ ಸೂಕ್ತ ರೀತಿಯಲ್ಲಿ ಉಪಯೋಗವಾಗದೆ ವ್ಯರ್ಥವಾಗುತ್ತಿರುತ್ತದೆ. ಇಂತಹ ಮೇಲ್ಛಾವಣಿಗಳಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲು ಬೆಂಗಳೂರಿನ ಲೋಟಸ್ ಎನರ್ಜಿ ಸಿಸ್ಟಂ ಹೊಸ ವಿನ್ಯಾಸ ಆವಿಷ್ಕರಿಸಿದೆ.

ಮೇಲ್ಛಾವಣಿ ಜಾಗವನ್ನು ಮತ್ತಷ್ಟು ಹೆಚ್ಚಿಸುವುದರ ಜತೆಗೆ ಅಧಿಕ ಸೌರಶಕ್ತಿ ಉತ್ಪಾದನೆಗೂ ಲೋಟಸ್ ಎನರ್ಜಿ ಸಿಸ್ಟಂ ಬಗೆಬಗೆಯ ವಿನ್ಯಾಸ ಸೃಷ್ಟಿಸಿದೆ. ಇಂತಹ 50 ಕಿಲೋವಾಟ್ ವಿದ್ಯುತ್ ಉತ್ಪಾದಿಸುವ ಒಂದು ಘಟಕವನ್ನು ಆಂಧ್ರಪ್ರದೇಶದ ಪುಟ್ಟಪರ್ತಿಯ ಶಾಲೆಯೊಂದರ ವಿದ್ಯಾರ್ಥಿನಿಯಲದ ಮೇಲ್ಛಾವಣಿಯಲ್ಲಿ ಕಂಪನಿ ಅಳವಡಿಸಿದೆ. ಈ ಪ್ರದೇಶವನ್ನು ಶಟಲ್ ಕೋರ್ಟ್ ಆಗಿ, ಯೋಗ ತರಬೇತಿ ಪ್ರದೇಶವಾಗಿ ಬಳಸಿಕೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಸಣ್ಣ ಮೇಲ್ಛಾವಣಿಯಿರುವ ಕಟ್ಟಡಗಳಿಗೆ 5 ಕಿಲೋವಾಟ್ ಸಾಮರ್ಥ್ಯದ ಸೌರಶಕ್ತಿ ಘಟಕಗಳನ್ನೂ ಕಂಪನಿ ಸಿದ್ಧಪಡಿಸಿದೆ. ವಿವರಕ್ಕೆ ದೂ: 99723 39027 ಸಂರ್ಪಸಿ. ಇ- ಮೇಲ್: [email protected]