ಹಾಸ್ಟೆಲ್​ನಲ್ಲಿ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಿ

ರೋಣ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ರೋಣ ತಹಸೀಲ್ದಾರ್ ಶರಣಮ್ಮ ಕಾರಿ ಅವರು ಸೋಮವಾರ ಸಂಜೆ ಭೇಟಿ ನೀಡಿ, ಕುಂದು-ಕೊರತೆ ಪರಿಶೀಲಿಸಿದರು.

ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ಅವರ ಓದಿನ ಬಗ್ಗೆ ಕೇಳಿದರು. ಅಭ್ಯಾಸದಲ್ಲಿ ಶಿಸ್ತು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಸರಿಯಾದ ಆಸನ, ಪ್ರತಿ ಕೊಠಡಿಗೆ ಅಗತ್ಯ ಸಲಕರಣೆ ಒದಗಿಸುವುದು, ಅಡುಗೆ ಮನೆಯಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ವಸತಿ ನಿಲಯದ ಸಿಬ್ಬಂದಿಗೆ ಸೂಚಿಸಿದರು. ಇದೇ ವೇಳೆ ತಹಸೀಲ್ದಾರರು ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು.

ವಸತಿ ನಿಲಯದ ಅಡುಗೆ ಸಹಾಯಕರಾದ ಎಂ.ಎಂ. ನಾಲಬಂದ, ರೇಣುಕಾ ಕೊಪ್ಪದ, ರಾತ್ರಿ ಪಾಳೆಯ ಕಾವಲುಗಾರ ಸಂತೋಷ ಪೂಜಾರ ಇದ್ದರು.

Leave a Reply

Your email address will not be published. Required fields are marked *