More

  ಹಾಸ್ಟೆಲ್‌ಗಳಿಗೆ ಸಿಇಒ ದಿಢೀರ್ ಭೇಟಿ


  ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳಿಗೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
  ನಗರದ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯ, ಚಿತ್ರಹಳ್ಳಿ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಸಮುಚ್ಛಯದ ವಸತಿ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ಸ್ವಚ್ಛತೆ, ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು.
  ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಕೋಣೆ, ಡೈನಿಂಗ್‌ಹಾಲ್, ಸ್ಟೋರ್ ರೂಂನಲ್ಲಿದ್ದ ಆಹಾರ ಪದಾರ್ಥಗಳು ಹಾಗೂ ಮೆನು ಚಾರ್ಟ್ ವೀಕ್ಷಿಸಿದರು. ನಿಲಯದಲ್ಲಿರುವ ಸೌಲಭ್ಯಗಳು ಹಾಗೂ ಊಟದ ವ್ಯವಸ್ಥೆ ಗಮನಿಸಿದರು. ಸ್ಟೋ ರೂಂ.ನಲ್ಲಿ ಫಿನಾಯಿಲ್ ಬಾಟಲ್‌ಗಳನ್ನು ನೋಡಿಂ ಗರಂ ಆಧ ಸಿಇಒ, ಕೂಡಲೇ ಅವುಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ವಾರ್ಡನ್‌ಗೆ ಸೂಚಿಸಿದರು.
  ಹಾಸ್ಟೆಲ್‌ಗೆ ದಾಖಲಾದ ಹಾಗೂ ಹಾಜರಿರುವ ವಿದ್ಯಾರ್ಥಿಗಳ ಸಂಖ್ಯೆ, ವಾಟರ್‌ಫಿಲ್ಟರ್, ಕಂಪ್ಯೂಟರ್ ತರಬೇತಿ, ಗ್ರಂಥಾಲಯ ಸೌಲಭ್ಯ, ಮೂಲ ಸೌಕರ್ಯಗಳ ಪರಿಶೀಲಿಸಿದರು. ಅಲ್ಲಿಯ ಸ್ವಚ್ಛತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
  ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿಪರ ಕೋರ್ಸ್‌ಗಳಿಗೆ ಪೂರಕವಾದ ಪುಸ್ತಕಗಳು, ಪ್ರಮುಖ ಲೇಖಕರ ಅತ್ಯುತ್ತಮ ಕೃತಿಗಳನ್ನು ಗ್ರಂಥಾಲಯದಲ್ಲಿ ಇಡುವಂತೆ ಸೂಚಿಸಿದರು.
  ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯಡಿ ಶುದ್ಧ ಕುಡಿಯುವ ನೀರಿನ ಘಟಕ, ಕಾಟ್‌ಗಳು, ಸೋಲಾರ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
  ಚಿತ್ರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಸಮುಚ್ಛಯದ ವಸತಿ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
  ಹಾಸ್ಟೆಲ್‌ಗೆ ಅಗತ್ಯವಿರುವ ಸವಲತ್ತುಗಳ ಕುರಿತಂತೆ ಸಲಹೆ ಪಡೆದ ಸಿಇಒ, ಚಿತ್ರಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯದಲ್ಲಿ ಊಟ ಮಾಡಿ, ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
  ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳ ದೂರು ಪುಸ್ತಕವನ್ನು ಇಡಬೇಕು. ಕುಡಿಯುವ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು.
  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಮತ್ತಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts