More

  ಹಾಸನದಲ್ಲಿ ಸಾವರ್ಕರ್ ಜನ್ಮ ದಿನಾಚರಣೆ

  ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ಹಿಂದೂ ಹಸಿರು ಪಡೆಯ ಜಿಲ್ಲಾ ಘಟಕದಿಂದ ಭಾನುವಾರ ಸಾವರ್ಕರ್ ಜನ್ಮ ದಿನ ಆಚರಿಸಲಾಯಿತು. ಸಂಘಟನೆಯ ಪದಾಧಿಕಾರಿಗಳು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿದರು.
  ಹಿಂದೂ ಹಸಿರು ಪಡೆ ರಾಜ್ಯಾಧ್ಯಕ್ಷ ವಿಶಾಲ್ ಅಗರ್‌ವಾಲ್ ಮಾತನಾಡಿ, ವೀರ ಸಾವರ್ಕರ್ ಜನ್ಮ ದಿನವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸಾವರ್ಕರ್ ದೇಶದ ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರ ತ್ಯಾಗ ಮತ್ತು ಧೈರ್ಯ ಯುವಕರಿಗೆ ಸ್ಫೂರ್ತಿ. ಅವರ ಜನ್ಮದಿನವನ್ನು ಆಚರಿಸುವ ಮೂಲಕ ಅವರನ್ನು ಎಲ್ಲರೂ ಸ್ಮರಿಸಬೇಕು ಎಂದು ಹೇಳಿದರು.
  ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ವೀರೇಗೌಡ, ಪ್ರಧಾನ ಕಾರ್ಯದರ್ಶಿ ಅವಿನಾಶ್, ರಾಜ್ಯ ಸಂಚಾಲಕ ದಿಲೀಪ್, ಜಿಲ್ಲಾಧ್ಯಕ್ಷ ಅಕ್ಷಯ್‌ಕುಮಾರ್, ಉಪಾಧ್ಯಕ್ಷ ಹರ್ಷಿತ್, ಸಹ ಸಂಘಟನಾ ಕಾರ್ಯದರ್ಶಿ ನಿಖಿಲ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts