ಹಾಸನ: ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂದಿನಂತೆ ವಾಹನ ಸಂಚಾರ ಪ್ರಾರಂಭವಾಗಿದ್ದು ನಗರದ ಮುಖ್ಯ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಎನ್.ಆರ್. ವೃತ್ತ, ಸಂತೆಪೇಟೆ, ಬಿಎಂ ರಸ್ತೆಯಲ್ಲಿ ಪೊಲೀಸ್ ವ್ಯಾನ್ ಗಳ ನಿಯೋಜಿಸಿದ್ದು ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.
ಶಾಲಾ ಕಾಲೇಜುಗಳು ಆರಂಭವಾಗಿದ್ದು, ಬಸ್ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ.
ವ್ಯಾಪಾರ ವಹಿವಾಟು ಶುರುವಾಗುತ್ತಿದೆ.
ಸಿಐಟಿಯು, ಎಐಟಿಯುಸಿ, ಕೆ ಎಸ್ ಆರ್ ಟಿಸಿ ವರ್ಕರ್ಸ್ ಆ್ಯಂಡ್ ಸ್ಟಾಪ್ ಯುನಿಯನ್ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದೆ.
ಬೆಳಗ್ಗೆ 11 ಗಂಟೆಗೆ ನಗರದ
ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.