ಬಾಲಿವುಡ್‌ನ ‘ಮರ್ದಾನಿ’ ಸರಣಿ, ‘ದೋಸ್ತ್’, ‘ಲವ್ ಕಿ ಅರೇಂಜ್ ಮ್ಯಾರೇಜ್’ ಚಿತ್ರಗಳು ಸೇರಿ ಹಲವು ಹಿಂದಿ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿರುವ ಖ್ಯಾತಿ ಅವ್ನೀತ್ ಕೌರ್‌ಗೆ ಸಲ್ಲುತ್ತದೆ. ಹಿಂದಿ ಚಿತ್ರರಂಗದಲ್ಲಿ ಸದ್ದು ಮಾಡಿರುವ ಅವರು ಹಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿಸಿದೆ. ‘ಮಿಷನ್ ಇಂಪಾಸಿಬಲ್’ ಸರಣಿ ಖ್ಯಾತಿಯ ಹಾಲಿವುಡ್ ನಟ ಟಾಮ್ ಕ್ರೂಸ್‌ರನ್ನು ಭೇಟಿಯಾಗಿರುವುದೇ ಅದಕ್ಕೆ ಕಾರಣ.
ಟಾಮ್ ಕ್ರೂಸ್ ಸದ್ಯ ‘ಮಿಷನ್ ಇಂಪಾಸಿಬಲ್’ ಸರಣಿಯ ಎಂಟನೇ ಸಿನಿಮಾ ‘ಮಿಷನ್ ಇಂಪಾಸಿಬಲ್: ದ ೈನಲ್ ರೆಕನಿಂಗ್’ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಟಾಮ್ ಕ್ರೂಸ್ ಭೇಟಿಯಾಗಿರುವ ಅವ್ನೀತ್, ಜಾಲತಾಣದಲ್ಲಿ ನಟನ ಜತೆಗಿರುವ ೆಟೋ ಹಂಚಿಕೊಂಡಿದ್ದಾರೆ. ‘ಟಾಮ್ ಕ್ರೂಸ್ ಭೇಟಿಯಾಗಿದ್ದು ನನ್ನ ಜೀವನದ ಅತ್ಯಮೂಲ್ಯ ಘಳಿಗೆ. ಚಿತ್ರದ ಸಾಹಸ ದೃಶ್ಯಗಳಿಗಾಗಿ ಸಮರ್ಪಣ ಭಾವದಿಂದ ಅವರು ಪ್ರಾಕ್ಟೀಸ್ ಮಾಡುತ್ತಾರೆ. ಇದನ್ನು ಪ್ರತ್ಯಕ್ಷವಾಗಿ ನೋಡಿ ನನಗಂತೂ ತುಂಬ ಖುಷಿಯಾಯಿತು. ಇನ್ನುಳಿದ ಮಾಹಿತಿ ನೀಡಲು ನಾನು ಕಾತುರಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ‘ಮಿಷನ್ ಇಂಪಾಸಿಬಲ್’ ತಂಡವು ‘ಮಿಷನ್ ವಿಚಾರಗಳು ಸದ್ಯದಲ್ಲಿಯೇ ತಿಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದೆ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿ ಕೆಲ ಬಾಲಿವುಡ್ ನಟಿಯರು ಈಗಾಗಲೇ ಹಾಲಿವುಡ್‌ನಲ್ಲಿ ಮಿಂಚಿದ್ದು, ಇದೀಗ ಈ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅವ್ನೀತ್ ಸದ್ಯ ಹಿಂದಿಯ ‘ಲವ್ ಇನ್ ವಿಯೆಟ್ನಾಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್