ಕವಿತಾಳ: ಹಾಲಾಪೂರ ಗ್ರಾಪಂ ಅಧ್ಯಕ್ಷೆಯಾಗಿ ಸಾಬಮ್ಮ ಗಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗುರುಮೂರ್ತಿ ಶುಕ್ರವಾರ ತಿಳಿಸಿದರು.
ಗ್ರಾಪಂ 26 ಸದಸ್ಯ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದೆ. ಗ್ರಾಪಂ ಉಪಾಧ್ಯಕ್ಷೆ ಬಸಮ್ಮ ಬಸವರಾಜ, ಹುಲಿಗೆಮ್ಮ ಯಮನಪ್ಪ, ಮೌನೇಶ ದುರುಗಪ್ಪ, ಅಮರೇಶ ಬಸಪ್ಪ, ಮೈಬುಸಾಬ್ ರಾಜಸಾಬ್, ಬಸವರಾಜ ಬೆಟ್ಟಪ್ಪ, ಶ್ಯಾಮಲಾಂಬ ನಾರಾಯಣರಾವ್, ಜೋಕಿನ ಹುಲುಗಪ್ಪ, ಮಲ್ಲಮ್ಮ ಅಮರೇಶ, ಶಿವಣ್ಣ ತಿಮ್ಮಣ್ಣ, ರೇಣುಕಮ್ಮ ಸಂಗಣ್ಣ, ಲಕ್ಷ್ಮಿ ಶಿವಪ್ಪ, ಯಂಕನಗೌಡ ಅಯ್ಯನಗೌಡ, ಬಸಮ್ಮ ಬಸವರಾಜ, ಮಹಾಂತೇಶ ಚಂದಪ್ಪ, ಯಲ್ಲಮ್ಮ ಮಹಾದೇವಪ್ಪ, ದುರುಗಮ್ಮ ಅಮರೇಶ ಇದ್ದರು.
ಸಾಬಮ್ಮ ಅವರ ಪುತ್ರ ಶಿವರಾಜ (26) ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದರು. ಪುತ್ರ ಶೋಕದ ನಡುವೆಯೇ ಶುಕ್ರವಾರ ಪಂಚಾಯಿತಿಗೆ ಆಗಮಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.