Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಹಾಲಕೆರೆಯಲ್ಲಿ ರೇನ್​ಗನ್ ಪ್ರಾತ್ಯಕ್ಷಿಕೆ

Thursday, 09.08.2018, 10:50 PM       No Comments

ನರೇಗಲ್ಲ: ಸಮೀಪದ ಹಾಲಕೆರೆಯ ರೈತ ಚಂದ್ರಶೇಖರಯ್ಯ ಸೊಪ್ಪಿಹಿರೇಮಠ ಅವರ ಹೊಲದಲ್ಲಿ ಬುಧವಾರ ನೀರು ಹರಿಸುವ ಆಧುನಿಕ ತಂತ್ರಜ್ಞಾನದ ರೇನ್ ಗನ್ ಯಂತ್ರದ ಪ್ರಾತ್ಯಕ್ಷಿಕೆ ಜರುಗಿತು.

ನೂತನ ತಂತ್ರಜ್ಞಾನ ವೀಕ್ಷಿಸಲು ರೈತರು ತಂಡೋಪತಂಡವಾಗಿ ಆಗಮಿಸಿ ಮಾಹಿತಿ ಪಡೆದರು. ಜಿಲ್ಲೆಯಲ್ಲಿಯೇ ಪ್ರಥಮವಾಗಿ ಹಾಲಕೆರೆಯಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆ ನಡೆದಿರುವುದು ವಿಶೇಷ. ಮಳೆಯಾಗದೇ ಬೆಳೆಗಳನ್ನು ಸಂರಕ್ಷಿಸಲು ಪರದಾಡುವ ರೈತರಿಗೆ ಈ ನೂತನ ಯಂತ್ರ ಸಹಾಯಕವಾಗಲಿದೆ.

ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅಗ್ರಿ ಇಂಡಸ್ಟ್ರೀಜ್ ಇಂಡಿಯಾ ಲಿ. ಸಂಸ್ಥೆಯ ವ್ಯವಸ್ಥಾಪಕ ಶಿವರಾಂ ಮೋಹನ, ‘ಯಂತ್ರದ ಸಹಾಯದಿಂದ ಒಂದು ನಿಮಿಷಕ್ಕೆ 365 ಲೀಟರ್ ನೀರನ್ನು ಬೆಳೆಗಳಿಗೆ ಸಿಂಪಡಿಸಬಹುದು. ಒಂದು ಗಂಟೆಯಲ್ಲಿ ಅರ್ಧ ಎಕರೆ ಪ್ರದೇಶಕ್ಕೆ ನೀರು ಹರಿಸಬಹುದು. ಕೆರೆ ಅಥವಾ ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿದ ನೀರನ್ನು ಪೈಪ್ ಮೂಲಕ ಯಂತ್ರಕ್ಕೆ ರವಾನಿಸಲಾಗುತ್ತದೆ. 230 ಮೀಟರ್ ಪೈಪ್ ಹೊಂದಿರುವ ಯಂತ್ರದ ಸಹಾಯದಿಂದ ಹೊಲದಲ್ಲಿ ಎತ್ತರಕ್ಕೆ ಚಿಮ್ಮುತ್ತದೆ. ಇದರಿಂದ ಕೃತಕ ಮಳೆ ಸೃಷ್ಟಿಯಾದ ರೀತಿಯಲ್ಲಿ ಕಂಡುಬರುತ್ತದೆ. ಎತ್ತರಕ್ಕೆ ನೀರು ಚಿಮ್ಮುವುದರಿಂದ ನೀರು ಸುಮಾರು 250ಮೀಟರ್ ವಿಸ್ತಿರ್ಣದವರೆಗೆ ಸಿಂಪಡಣೆಯಾಗುತ್ತದೆ. ಕೂಲಿ ಕಾರ್ವಿುಕರ ಸಹಾಯವಿಲ್ಲದೆ ಕಡಿಮೆ ಖರ್ಚಿನಲ್ಲಿ ನೀರು ಹಾಯಿಸಬಹುದಾಗಿದೆ’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಈ ಭಾಗದ ರೈತರು ರೇನ್​ಗನ್ ಬಗೆಗೆ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವಂತೆ ಸಬ್ಸಿಡಿ ದರದಲ್ಲಿ ರೈತರಿಗೆ ಯಂತ್ರ ವಿತರಿಸುವಂತೆ ಕೋರಲಾಗುತ್ತದೆ. ಅಲ್ಲದೆ, ಕೃಷಿ ಯಂತ್ರಧಾರೆ ಯೋಜನೆಯಡಿ ಬಾಡಿಗೆ ಆಧಾರದಲ್ಲಿ ನೀಡಲು ರ್ಚಚಿಸಲಾಗುತ್ತದೆ ಎಂದರು.

ನರೇಗಲ್ಲ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಹುಲಕೋಟಿ ಕೆವಿಜಿಯ ಎಂ. ಕೊರವಣ್ಣವರ, ಶರಣಯ್ಯ ರುದ್ರಾಕ್ಷಿಮಠ, ಬಸವರಾಜ ಅಂಗಡಿ, ಹನುಮಪ್ಪ ಪ್ರಭಣ್ಣವರ, ಬಸಪ್ಪ ಬಂಗಾಳಿಗಿಡದ, ಮುದಕಪ್ಪ ಮುಲಿಮನಿ ಇತರರಿದ್ದರು.

ಹೆಚ್ಚು ತೇವಾಂಶ….: ಕೆಲವೆಡೆ ರೈತರು ಕೃಷಿ ಹೊಂಡದ ನೀರನ್ನು ಬಳಸಿಕೊಂಡು ಡೀಸೆಲ್ ಇಂಜಿನ್ ಸಹಾಯದಿಂದ ಸ್ಪಿಂಕ್ಲರ್ ಮೂಲಕ ನೀರು ಹರಿಸುತ್ತಿದ್ದಾರೆ. ಆದರೆ, ಸ್ಪಿಂಕ್ಲರ್ ಮೂಲಕ ನೀರು ಹಾಯಿಸಲು ಕಾರ್ವಿುಕರ ಅವಶ್ಯಕತೆ ಇದೆ. ಅಲ್ಲದೆ, 20 ಅಡಿಯ ಪೈಪ್​ಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಬೆಳೆಗಳಿಗೂ ಧಕ್ಕೆಯಾಗುತ್ತದೆ. ಆದರೆ, ರೇನ್ ಗನ್ ಬೆಳೆಗಳ ಮಧ್ಯದಲ್ಲಿ ಸ್ವಯಂ ಚಾಲಿತವಾಗಿ ಸಂಚರಿಸುವ ಮೂಲಕ, ಬೆಳೆಗಳಿಗೆ ಯಾವುದೇ ಹಾನಿ ಮಾಡದೇ ಸುಮಾರು 10 ಎಂ.ಎಂ ಮಳೆ ಬಿದ್ದಾಗ ಸಿಗುವಷ್ಟು ತೇವಾಂಶ ನೀಡುತ್ತದೆ. ಕೃಷಿ ಹೊಂಡ ಇಲ್ಲದಿದ್ದರೂ ಟ್ಯಾಂಕರ್ ಮೂಲಕ ನೀರನ್ನು ಈ ಯಂತ್ರದ ಸಹಾಯದಿಂದ ಜಮೀನುಗಳಿಗೆ ಹಾಯಿಸಬಹುದು.

Leave a Reply

Your email address will not be published. Required fields are marked *

Back To Top