ಹಾಪ್​ಕಾಮ್ಸ್​ಗೆ ವಂಚನೆ: ಖಾಸಗಿ ಕಂಪನಿ ವಿರುದ್ಧ ಸಿದ್ದಾಪುರ ಠಾಣೆಗೆ ದೂರು

ಬೆಂಗಳೂರು: ಹಾಪ್​ಕಾಮ್ಸ್​ನ 7 ಮಾರಾಟ ಮಳಿಗೆಗಳ ಪ್ರಾಂಚೈಸಿ ಪಡೆದ ಖಾಸಗಿ ಸಂಸ್ಥೆ 8 ಲಕ್ಷ ರೂ. ಬಾಕಿ ಪಾವತಿ ಮಾಡದೆ ತೋಟಗಾರಿಕೆ ಇಲಾಖೆಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಎಂ. ಪ್ರಸಾದ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಪೊಲೀಸರು ಜೆ.ಪಿ. ನಗರದ ಎಸ್​ಆರ್​ಕೆಜಿಸಿ ಇಂಟರ್ ನ್ಯಾಷನಲ್ ಪ್ರೖೆ.ಲಿ ಕಂಪನಿಯ ರವಿಕುಮಾರ್ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

2018ರ ಏ.24ರಂದು ರವಿಕುಮಾರ್ ಒಡಂಬಡಿಕೆ ಮಾಡಿಕೊಂಡು ಹಾಪ್​ಕಾಮ್್ಸ ಸಂಸ್ಥೆಯಿಂದ 7 ಮಾರಾಟ ಮಳಿಗೆಗಳನ್ನು ಸಹಭಾಗಿತ್ವಕ್ಕೆ ಪಡೆದುಕೊಂಡಿದ್ದರು. 2018ರ ಜೂನ್​ನಿಂದ 2019ರ ಮಾರ್ಚ್​ವರೆಗೆ ಉತ್ಪನ್ನಗಳನ್ನು ತೆಗೆದುಕೊಂಡು 18 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ನಡುವೆ ಫ್ರಾಂಚೈಸಿ ಕಚೇರಿಗೂ ಬಾಗಿಲು ಹಾಕಲಾಗಿದೆ. ಇದಕ್ಕೂ ಮೊದಲು ನೀಡಿದ್ದ ಚೆಕ್​ಗಳು ಬೌನ್ಸ್ ಆಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *