ಹಾಡು ಕುಣಿತಗಳಲ್ಲಿ ಬಂಜಾರ ಸಂಸ್ಕೃತಿ ಅನಾವರಣ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾರತ ದೇಶದ ಹೆಮ್ಮೆಯ ಸಮುದಾಯಗಳಲ್ಲಿ ಪ್ರಮುಖವಾದ ಬಂಜಾರ ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆಯ ದರ್ಶನ ಕಣ್ತುಂಬಿಕೊಳ್ಳುವ ಅವಕಾಶ ಶನಿವಾರ ಲಭ್ಯವಾಯಿತು.

ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಬಂಜಾರ ಲೋಕಕಲಾ ಸಂಘಟನೆ ಪ್ರಸ್ತುತಪಡಿಸಿದ ಬಂಜಾರ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಕ್ಕೆ ಸೇವಾಲಾಲ್ ಸಮಾಜದ ಗೊಬ್ಬುರವಾಡಿಯ ಶ್ರೀ ಬಳಿರಾಮ ಮಹಾರಾಜ, ಚೌಡಾಪುರದ ಶ್ರೀ ಮುರಾಹರಿ ಮಹಾರಾಜ, ಶ್ರೀನಿವಾಸ ಸರಡಗಿಯ ಶ್ರೀ ಗಣಪತ ಮಹಾರಾಜ, ತರಿತಾಂಡಾದ ಅನೀಲ ಮಹಾರಾಜ, ಕಲಬುರಗಿಯ ಶ್ರೀ ಲತಾದೇವಿ, ಮದಿಹಾಳ ತಾಂಡಾದ ಶ್ರೀ ಕಲಾವತಿ ದೇವಿ ಚಾಲನೆ ನೀಡಿದರು.

ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಮತ್ತು ವಿವಿಧ ಸೇವಾಲಾಲ ಸಮಿತಿಗಳು ಹಾಗೂ ಬಂಜಾರ ಮಹಿಳಾ ಪತ್ತಿನ ಸಹಕಾರ ಸಂಘದ ಸಹಯೋಗದಡಿ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರೇವೂನಾಯಕ ಬೆಳಮಗಿ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಪಂ ಮಾಜಿ ಉಪಾಧ್ಯಕ್ಷೆ ಪಾರ್ವತಿಬಾಯಿ ಶಂಕರ ಚವ್ಹಾಣ್, ಪ್ರಮುಖರಾದ ವಿಠ್ಠಲ್ ಜಾಧವ್, ಶಂಕರ ಪವಾರ್, ಜೀವನಲಾಲ್ ಲವಡಿಯಾ, ವಿಜಯ ರಾಠೋಡ, ಡಾ.ದಶರಥ ನಾಯಕ, ಬಿ.ಎಲ್.ಚವ್ಹಾಣ್, ಶಂಕರಸೇಠ ರಾಠೋಡ, ರಾಮನಾಯಕ ಬೆಂಗಳೂರು, ಬಾಬುಸೇಠ ಚವ್ಹಾಣ್, ಶಾರದಾ ಯಾಕಾಪುರ, ಸುಭಾಷ ರಾಠೋಡ, ಬಾಬುರಾವ ಚವ್ಹಾಣ್, ಈಶ್ವರ ಸೀತಾರಾಮ ಚವ್ಹಾಣ್, ರಮೇಶ ರಾಠೋಡ, ಬಾಬು ಹೊನ್ನನಾಯಕ, ವಿಜಯಕುಮಾರ ಚವ್ಹಾಣ್, ವಸಂತ ಜಾಧವ್, ನಾಮದೇವ ಕರಹರಿ, ರಾಮಚಂದ್ರ ಜಾಧವ್, ವಾಸು ನಾಯಕ ಪವಾರ್, ನೀಲಕಂಠ ರಾಠೋಡ, ವಾಲ್ಮೀಕಿ ರಾಠೋಡ, ರಾಮ ರಾಠೋಡ ಮುಂಬಯಿ, ಅರುಣ ಪವಾರ್, ಶಾಮ ಪವಾರ್, ಅರವಿಂದ ಚವ್ಹಾಣ್, ಕಮಲಾಕರ ಚವ್ಹಾಣ್, ಜೈಸಿಂಗ್ ಜಾಧವ್, ಡಾ.ದೇವಿದಾಸ ರಾಠೋಡ, ಹನುಮಾನಾಯಕ ಚವ್ಹಾಣ್, ಶ್ರೀನಿವಾಸ ಚವ್ಹಾಣ್, ರೀಮಾ ಚವ್ಹಾಣ್, ರುಕ್ಮಿಣಿಬಾಯಿ, ಡಾ.ಶಾರದಾಬಾಯಿ, ಕಲ್ಪನಾ ಪವಾರ್, ಪ್ರವೀಣ ಪವಾರ್, ಮಾನಸಿಂಗ್ ಚವ್ಹಾಣ್, ಅಶೋಕ ರಾಠೋಡ, ಪ್ರೇಮಸಿಂಗ್ ಚವ್ಹಾಣ್, ಡಾ.ದೇವಿದಾಸ ರಾಠೋಡ ಇತರರಿದ್ದರು.

= ಕೋಟ್
ಲಂಬಾಣಿ ಸಮುದಾಯದ ಸರ್ವ ಸಂಸ್ಕಾರದ ವಿಧಿ ವಿಧಾನಗಳು ಹಾಡಿನ ರೂಪದಲ್ಲಿರುವುದು ಗಮನಾರ್ಹ. ಆದ್ದರಿಂದ ಬಂಜಾರ ಸಮುದಾಯದ ಯುವಕ-ಯುವತಿಯರು ಲಂಬಾಣಿ ಭಾಷೆ ಕಲಿಯಬೇಕು. ಭಾಷೆಯಲ್ಲೇ ಸಂಸ್ಕೃತಿ ಅಡಕವಾಗಿದ್ದರಿಂದ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ ಎಂಬುದನ್ನು ಮರೆಯಬಾರದು.
| ಸುಭಾಷ ರಾಠೋಡ
ಜಿಪಂ ಮಾಜಿ ಉಪಾಧ್ಯಕ್ಷ