ಹಾಕಿ ತಂಡದ ಆಯ್ಕೆ ಪ್ರಕ್ರಿಯೆಗೆ ಕೈಗಾದ ಮೂವರಿಗೆ ಅವಕಾಶ

ಕಾರವಾರ: ಅಖಿಲ ಭಾರತ ರೋಲರ್ ಸ್ಕೇಟಿಂಗ್ ಹಾಕಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್​ನ ಮೂವರು ಬಾಲಕಿಯರಿಗೆ ಅವಕಾಶ ಲಭಿಸಿದೆ.

ಮೇ 1 ರಿಂದ 5ರವರೆಗೆ ಗುಜರಾತ್​ನ ನಂದರುಬಾರ್​ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಲ್ಲಿ ಆಯ್ಕೆಯಾದರೆ ಮೂವರು ಸ್ಪೇನ್​ನ ಬಾರ್ಸಿಲೋನಾದಲ್ಲಿ ನಡೆಯಲಿರುವ ರೋಲರ್ ಸ್ಕೇಟಿಂಗ್ ಹಾಕಿ ವಿಶ್ವ ಕಪ್​ನಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕೈಗಾ ಅಣು ವಿದ್ಯುತ್ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ಕೃತಿ ಹುಕ್ಕೇರಿ, ಪ್ರತೀಕ್ಷಾ ಕುಲಕರ್ಣಿ, ಎಸ್.ಡಿ. ಯುಕ್ತಿಶ್ರೀ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ನಿರಂತರ ಮೂರು ವರ್ಷ ಕರ್ನಾಟಕ ರೋಲರ್ ಸ್ಕೇಟಿಂಗ್ ಹಾಕಿ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ತರುವಲ್ಲಿ ಯಶಸ್ವಿಯಾಗಿದ್ದರು. ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್​ನ ದಿಲೀಪ ಹಣಬರ್ ತರಬೇತಿ ನೀಡುತ್ತಿದ್ದಾರೆ. ಮೂವರು ಪ್ರತಿ ದಿನ 5 ತಾಸು ನಿರಂತರ ಅಭ್ಯಾಸ ಮಾಡುತ್ತಿದ್ದು, ಭಾರತ ತಂಡಕ್ಕೆ ಖಂಡಿತ ಆಯ್ಕೆಯಾಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *