ಹಾಕರ್ಸ್ ಝೋನ್ ನಿರ್ವಣಕ್ಕೆ ಒತ್ತಾಯ

ಧಾರವಾಡ: ನಗರದ ನೆಹರು ಮಾರ್ಕೆಟ್, ಸೂಪರ್ ಮಾರ್ಕೆಟ್ ಹಾಗೂ ಸುಭಾಸ ರಸ್ತೆಯಲ್ಲಿನ ಬೀದಿ ವ್ಯಾಪಾರಸ್ಥರಿಗೆ ಪಾಲಿಕೆ ವತಿಯಿಂದ ಹಾಕರ್ಸ್ ಝೋನ್ ನಿರ್ವಿುಸಿ ಕೊಡಬೇಕು. ಇದರಿಂದ ಅಂಗಡಿ ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ರ್ಪಾಂಗ್ ವ್ಯವಸ್ಥೆ ಸರಿಯಾಗಲಿದೆ ಎಂದು ಇಲ್ಲಿನ ಪಾಲಿಕೆ ಕಚೇರಿಯ ಸಭಾಗಂಣದಲ್ಲಿ ಸೋಮವಾರ ಜರುಗಿದ ವ್ಯಾಪಾರಸ್ಥರ ಸಭೆಯಲ್ಲಿ ಅಂಗಡಿಕರರು ಆಗ್ರಹಿಸಿದರು.

ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಹರ್ಷವರ್ಧನ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ನಮ್ಮ ಅಂಗಡಿಯ ಮುಂದೆ ನಿಂತು ವ್ಯಾಪಾರ ಮಾಡುತ್ತಾರೆ. ಇಂದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಜೊತೆಗೆ ನಾವು ನಷ್ಟ ಅನುಭವಿಸುತ್ತಿದ್ದೇವೆ ಎಂದು ಅಳಲು ತೊಡಿಕೊಂಡರು.

ಇನ್ನೊಬ್ಬ ವ್ಯಾಪಾರಸ್ಥ ಸತೀಶ ತುರಮರಿ ಮಾತನಾಡಿ, ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಹಾಗೂ ಸುಭಾಸ ರಸ್ತೆಯಲ್ಲಿನ ಬೀದಿ ವ್ಯಾಪಾರಸ್ಥರನ್ನು ಸೂಪರ್ ಮಾರ್ಕೆಟ್​ಗೆ ಸ್ಥಳಾಂತರಿಸಬೇಕು. ಇದರಿಂದ ಅಂಗಡಿ ವ್ಯಾಪಾರಸ್ಥರಿಗೆ ಮತ್ತು ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ವಿವಿಧ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹೆಚ್ಚಿನ ಹಾಕರ್ಸ್ ಝೋನ್ ತೆರೆಯುವ ಹಾಗೂ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಕುರಿತು ಪಾಲಿಕೆ ಮತ್ತು ಎಪಿಎಂಸಿ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ಸೂಪರ್ ಮಾರ್ಕೆಟ್ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಮಾರುಕಟ್ಟೆಯ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಆಯುಕ್ತ ಶಕೀಲ್ ಅಹಮ್ಮದ್ ಮಾತನಾಡಿ, ಕೆಲ ಅಂಗಡಿ ವ್ಯಾಪಾರಸ್ಥರು ರಸ್ತೆ ಅಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸುಗಮ ಸಂಚಾರಕ್ಕೆ ವ್ಯಾಪಾರಸ್ಥರ ಸಹಕಾರ ಅಗತ್ಯ. ವ್ಯಾಪಾರಸ್ಥರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಪರಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಂಚಾರ ಠಾಣೆ ಇನ್ಸ್​ಪೆಕ್ಟರ್ ಮುರುಗೇಶ ಚನ್ನಣ್ಣವರ ಮಾತನಾಡಿ, ಸಂಚಾರಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಯ ವ್ಯಾಪಾರಸ್ಥರು ಸ್ಪಷ್ಟ ನಿರ್ಧಾರಕ್ಕೆ ಬರಲಿ. ಸಾರ್ವಜನಿಕರ, ವ್ಯಾಪಾರಸ್ಥರ ಅನುಕೂಲಕ್ಕೆ ತಕ್ಕಂತೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತದೆ ಎಂದರು.

ವ್ಯಾಪಾರಸ್ಥ ನವೀನ್ ಪಟೇಲ್ ಮಾತನಾಡಿದರು. ಪಾಲಿಕೆ ಸದಸ್ಯ ಸಂಜಯ ಕಪಟಕರ, ಪಾಲಿಕೆಯ ವಲಯ ಅಧಿಕಾರಿ ಬಿ.ಎ. ಹಂಚಿನಮನಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಶೋಕ ದೊಡಮನಿ, ಉದಯ ಯಂಡಿಗೇರಿ, ಇತರರು ಉಪಸ್ಥಿತರಿದ್ದರು.