ಹಸೆಮಣೆ ಏರಿದ ದಿಲೀಪ್- ಕಾವ್ಯಾ

ಮಲಯಾಳಂ ನಟ ದಿಲೀಪ್ ಮತ್ತು ನಟಿ ಕಾವ್ಯಾ ಮಾಧವನ್ ಶುಕ್ರವಾರ (ನ. 25) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೇರಳದ ಕೊಚ್ಚಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಮಮ್ಮೂಟ್ಟಿ, ನಿರ್ದೇಶಕ ಜೋಸೆಫ್ ಹಾಗೂ ದಿಲೀಪ್ ಪುತ್ರಿ ಮೀನಾಕ್ಷಿ ಹಾಜರಾಗಿ ನವ ಜೋಡಿಗೆ ಶುಭಕೋರಿದರು. ದಿಲೀಪ್ ಮತ್ತು ಕಾವ್ಯಾಗೆ ಇದು ಎರಡನೇ ಮದುವೆ. 1999ರಲ್ಲಿ ನಟಿ ಮಂಜು ವಾರಿಯರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ದಿಲೀಪ್, 2015ರಲ್ಲಿ ವಿಚ್ಛೇದನ ನೀಡಿದ್ದರು. 2009ರಲ್ಲಿ ನಿಶಾಲ್ ಜತೆ ಹಸೆಮಣೆ ಏರಿದ್ದ ನಟಿ ಕಾವ್ಯಾ, ಮರುವರ್ಷವೇ ಪತಿಗೆ ಡೈವೋರ್ಸ್ ನೀಡಿದ್ದರು. ಕೆಲ ವರ್ಷಗಳಿಂದೀಚೆಗೆ ದಿಲೀಪ್ ಮತ್ತು ಕಾವ್ಯಾ ನಡುವೆ ಪ್ರೀತಿ ಅರಳಿ, ಕಳೆದ ಮೂರು ವರ್ಷಗಳಿಂದ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು. ಈಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.

1994ರಲ್ಲಿ ‘ಸಲ್ಲಾಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ದಿಲೀಪ್, 130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲನಟಿಯಾಗಿ 1991ರಲ್ಲಿ ಚಿತ್ರರಂಗ ಪ್ರವೇಶಿಸಿದ ಕಾವ್ಯಾ ಮಾಧವನ್, 1999ರಲ್ಲಿ ‘ಚಂದ್ರನುಡುಕ್ಕಿನ್ನ ದಿಕ್ಕಿಲ್’ ಮೂಲಕ ನಾಯಕಿ ಪಟ್ಟ ಅಲಂಕರಿಸಿದರು. ದಿಲೀಪ್ ಜತೆ ‘ಮೀಸಾ ಮಾದವನ್’ ಚಿತ್ರದಲ್ಲಿ ಕಾವ್ಯಾ ನಟಿಸಿದ್ದರು. ತೆರೆಮೇಲೆ ಈ ಜೋಡಿ ಕೆಮಿಸ್ಟ್ರಿ ವರ್ಕೌಟ್ ಅಗಿದ್ದರಿಂದ, ಇನ್ನೂ ಚಿತ್ರೀಕರಣದಲ್ಲಿರುವ ‘ರನ್ ವೇ’ ಸೇರಿ ಒಟ್ಟು 21 ಚಿತ್ರಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ.

ಅಂದಹಾಗೆ, ದಿಲೀಪ್- ಕಾವ್ಯಾ ಮದುವೆ ಸುದ್ದಿ ಕೇಳಿ ಮಲಯಾಳಂ ನಟಿ ಮೀರಾ ಜಾಸ್ಮಿನ್ಗೆ ಶಾಕ್ ಆಗಿದೆಯಂತೆ! ‘ಬೆಳಗ್ಗೆ 4 ಗಂಟೆ ಸುಮಾರಿಗೆ, ಕಾವ್ಯಾ ಮಸೇಜ್ ಬಂದಿತ್ತು. ಆಗಲೇ ಕಾವ್ಯಾ ಮತ್ತು ದಿಲೀಪ್ ಮದುವೆ ಆಗುತ್ತಿರುವ ವಿಷಯ ಗೊತ್ತಾಗಿದ್ದು. ಅವರಿಬ್ಬರೂ ನನ್ನ ಸ್ನೇಹಿತರು. ಆದರೂ ಮದುವೆಯಾಗುವ ಯಾವುದೇ ಸುಳಿವು ನೀಡಿರಲಿಲ್ಲ. ಅವರ ಹೊಸ ಜೀವನ ಹ್ಯಾಪಿಯಾಗಿರಲಿ’ ಅಂತ ಶುಭ ಕೋರಿದ್ದಾರೆ.

– ಏಜೆನ್ಸೀಸ್

Leave a Reply

Your email address will not be published. Required fields are marked *