ಹಸಿರು ಹೊನ್ನೂರಿಗೆ ಮಾದರಿ ಶಾಲೆ

ಶ್ರೀನಿವಾಸಪುರ: ಅಮ್ಮಚೆರವುಪಲ್ಲಿ ಮತ್ತು ಮೊರಮಕಿಂದಪಲ್ಲಿ ರಸ್ತೆಯಲ್ಲಿ ಕಳೆದ ವರ್ಷ ಅಲೆಮಾರಿ ಕುಟುಂಬಗಳಿಗೆ 5 ಮನೆ ನಿರ್ವಿುಸಿ ಹಸಿರು ಹೊನ್ನೂರು ಎಂದು ನಾಮಕರಣ ಮಾಡಿದ್ದ ಹಸಿರು ಹೊನ್ನು ಬಳಗ ಇದೇ ಗ್ರಾಮದಲ್ಲಿ ಜೂ.12ರಿಂದ ಮಾದರಿ ಶಾಲೆ ಪ್ರಾರಂಭಿಸಲು ಮುಂದಾಗಿದೆ.

ಒಂದೂವರೆ ವರ್ಷಗಳಿಂದ ಮುದಿಮುಡುಗು ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ತಮಿಳುನಾಡು ಮೂಲದ 6 ಕುಟುಂಬಗಳು ಮರಗಳನ್ನೇ ಆಶ್ರಯವಾಗಿ ಪಡೆದು ಜೀವನ ನಡೆಸುತ್ತಿದ್ದವು. ‘ನಮ್ಮ ಮಕ್ಕಳು’ ಎಂಬ ಸಂಸ್ಥೆ ಮತ್ತು ಹಸಿರು ಹೊನ್ನು ಬಳಗ ಮುಖ್ಯಸ್ಥ, ಸಾಹಿತಿ ಸ.ರಘುನಾಥ್ ಗುರುತಿಸಿ ದಾನಿಗಳ ಸಹಾಯದಿಂದ 6 ಮನೆ ನಿರ್ವಿುಸಿಕೊಟ್ಟಿದ್ದರು.

5 ಕುಟುಂಬಗಳಲ್ಲಿ 25 ಮಂದಿ ವಾಸವಿದ್ದಾರೆ. ಇಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಮಕ್ಕಳ ಸಂಸ್ಥೆಯಿಂದಲೇ ತಾತ್ಕಾಲಿಕವಾಗಿ ಒಂದು ಮನೆಯಲ್ಲಿ ಶಾಲೆ ಹಾಗೂ ಎರಡು ತಿಂಗಳ ಹಿಂದೆ ಹುಟ್ಟಿರುವ ಮಗುವಿಗೆ ನಾಮಕರಣ ಮಹೋತ್ಸವವನ್ನು ಜೂ.12ರಂದು ಏರ್ಪಡಿಲಾಗಿದೆ ಎಂದು ಸಾಹಿತಿ ಸ. ರಘುನಾಥ್ ತಿಳಿಸಿದ್ದಾರೆ.

ಅಮ್ಮಚೆರವು ಗ್ರಾಮದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರವಿದ್ದರೂ ಇವರ ಬಳಿ ಕರ್ನಾಟಕದವರೆಂಬ ಮೂಲ ದಾಖಲೆಗಳು ಇಲ್ಲದಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಶಾಲೆ ಸ್ಥಾಪಿಸಿ ಅಂಗವಿಕಲೆ ಬಾನುತಾಜ್ ಎಂಬ ಶಿಕ್ಷಕಿಯನ್ನು ನೇಮಿಸಲಾಗಿದೆ ಎಂದು ರಘುನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *