ಹಸಿರು ಬಣ್ಣಕ್ಕೆ ತಿರುಗಿದ ಕೆಸಿ ವ್ಯಾಲಿ ನೀರು!

ಕೋಲಾರ: ಜಿಲ್ಲೆಯ ಕೆರೆಗಳಿಗೆ ಕೆಸಿ ವ್ಯಾಲಿ ಮೂಲಕ ಹರಿಸುತ್ತಿರುವ ನೀರು ಪಾಚಿ ಕಟ್ಟುತ್ತಿರುವುದಕ್ಕೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀಸಾಗರ, ನರಸಾಪುರ, ದೊಡ್ಡ ವಲ್ಲಭಿ ಸೇರಿ 10ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿದ್ದು, ಎರಡು ದಿನಗಳಿಂದ ನರಸಾಪುರ ಕೆರೆಯಿಂದ ಕೋಡಿ ಹರಿಯುತ್ತಿರುವ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಬಾರಿ ಶುದ್ಧೀಕರಿಸಿ ಪೈಪ್​ಲೈನ್ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿದೆ. ಸುಪ್ರೀಂಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ತಿಂಗಳಿಂದ ಕೆರೆಗಳಿಗೆ ಹರಿಸಲಾಗುತ್ತಿರುವ ನೀರಿನ ಬಣ್ಣದಲ್ಲಿ ವ್ಯತ್ಯಾಸವಿರಲಿಲ್ಲ, ಇದ್ದಕ್ಕಿದಂತೆ ನೀರಿನ ಬಣ್ಣ ಬದಲಾಗಿದೆ.

ಬೆಂಗಳೂರಿನ ಕೆಸಿ ವ್ಯಾಲಿ ನೀರು ಶುದ್ಧೀಕರಣ ಘಟಕದಲ್ಲೇ ಲೋಪವಾಗಿರಬಹುದು. ಇದೇ ರೀತಿ ನೀರು ಹರಿದರೆ ಕೆರೆಗಳು ಹಾಳಾಗುತ್ತವೆ, ಜಲಚರ ಸಾಯುತ್ತವೆ, ಅಂತರ್ಜಲ ಕಲುಷಿತವಾಗಬಹುದೆಂದು ಜನ ಗಾಬರಿಯಾಗಿದ್ದಾರೆ.

ಕೆಸಿ ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕೆಂದು ನಾನು ಮೊದಲಿನಿಂದಲೂ ಹೇಳುತ್ತಿದ್ದರೂ ರಾಜ್ಯ ಸರ್ಕಾರ ಗಮನ ನೀಡುತ್ತಿಲ್ಲ. ಜಿಲ್ಲೆಯ ಕೆರೆಗಳು ಈಗಾಗಲೇ ಸ್ವಚ್ಛತೆ ಇಲ್ಲದೆ ವಿರೂಪಗೊಂಡಿವೆ. ಕೆಸಿ ವ್ಯಾಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಏಕೆ ಎಂಬುದನ್ನು ಸರ್ಕಾರ ಸಂಬಂಧಪಟ್ಟ ಇಲಾಖೆ ಮೂಲಕ ವರದಿ ತರಿಸಿಕೊಂಡು ಜನರ ಆತಂಕ ನಿವಾರಿಸಬೇಕು.

| ಆರ್.ಆಂಜನೇಯರೆಡ್ಡಿ, ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *