ಕಳಸ: ಕಲಶೇಶ್ವರ ದೇವರ ಗಿರಿಜಾ ಕಲ್ಯಾಣೋತ್ಸವಕ್ಕೆ ತಾಲೂಕು ಒಕ್ಕಲಿಗರ ಸಂಘದಿಂದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಿಸಲಾಯಿತು.
ಒಕ್ಕಲಿಗ ಭಕ್ತರು ದೇವರಿಗೆ ತರಕಾರಿ, ಅಕ್ಕಿ, ಬೇಳೆಕಾಳು, ಬೆಲ್ಲ, ಸಕ್ಕರೆ ಮುಂತಾದ ವಸ್ತುಗಳನ್ನು ತಂದು ಸಮರ್ಪಿಸಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಶ್ ಯಡದಾಳು, ಪ್ರಧಾನ ಕಾರ್ಯದರ್ಶಿ ಅವಿನಾಶ್ ನೂಜಿ, ಖಚಾಂಚಿ ರಂಜನ್, ವಿದ್ಯಾನಂದ ಬಸ್ರಿಕಲ್, ಕೆ.ಆರ್.ಪ್ರಭಾಕರ್, ಆದರ್ಶ, ದಿನೇಶ್, ಸತೀಶ್ ಕಲ್ಲಾನೆ, ವಿಶ್ವನಾಥ ಮರಸಣಿಗೆ, ಭಾಸ್ಕರ ಗೌಡ, ಅರುಣ್, ನವೀನ್, ರಮೇಶ್, ಸುಬ್ರಹ್ಮಣ್ಯ, ಸುನೀಲ್ ಇತರರಿದ್ದರು.