ಹಳ್ಳಿಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

ಹಳಿಯಾಳ:ಪ್ರತಿಯೊಂದು ಯೋಜನೆಯನ್ನು ಸರ್ಕಾರದಿಂದಲೇ ಮಾಡಲು ಅಸಾಧ್ಯ. ಸ್ವಯಂ ಸೇವಾ ಸಂಸ್ಥೆಗಳು, ಉದ್ದಿಮೆದಾರರು ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟಿ ಸಂಸ್ಥೆಯ ಕಾರ್ಯಕಾರಿಣಿ ಮಂಡಳಿಯ ಅಧ್ಯಕ್ಷ ಪ್ರಸಾದ ಆರ್. ದೇಶಪಾಂಡೆ ಹೇಳಿದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟಿ ಹಾಗೂ ಈಐಡಿ ಪ್ಯಾರಿ (ಇಂಡಿಯಾ)ಲಿ. ಸಹಯೋಗದಲ್ಲಿ ದತ್ತು ಗ್ರಾಮ ದೊಡ್ಡಕೊಪ್ಪ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಂಚಾರಿ ಉಚಿತ ಆರೋಗ್ಯ ವಾಹಿನಿಯ ಉದ್ಘಾಟನೆ ಮತ್ತು ಬ್ರಿಟಾನೀಯಾ ಕಂಪನಿಯ ಸಹಭಾಗಿತ್ವದಲ್ಲಿ ದೊಡ್ಡಕೊಪ್ಪ ಮತ್ತು ಬಂಟರಗಾಳಿ ಗ್ರಾಮಕ್ಕೆ 60 ಎಲ್​ಇಡಿ ಬೀದಿ ದೀಪಗಳನ್ನು ವಿತರಿಸಿ ಅವರು ಮಾತನಾಡಿದರು. ಈಐಡಿ ಪ್ಯಾರಿ ಲಿ.ನ. ಜನರಲ್ ಮ್ಯಾನೇಜರ್ ರವೀಂದ್ರ ಮಾತನಾಡಿದರು. ಜಿ.ಪಂ. ಸದಸ್ಯೆ ಲಕ್ಷಿ್ಮೕ ಸುಭಾಸ ಕೊರ್ವೆಕರ, ದೇಶಪಾಂಡೆ ಆರ್​ಸೆಟಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ, ಮಹಾದೇವ ಪವಾರ, ಸುಭಾಸ ಕೊರ್ವೆಕರ, ಪ್ರಕಾಶ ಪ್ರಭು, ವಿಠ್ಠಲ ಚೊರಲೇಕರ್, ಡಾ. ಲಕ್ಷ್ಮಣ, ವಿನಾಯಕ ಚವ್ಹಾಣ, ಬ್ರಹ್ಮಾ ಧಾರವಾಡಕರ, ಗ್ರಾಮದೇವಿ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಹಾಗೂ ಯೋಜನಾಧಿಕಾರಿ ಸಂತೋಷ ಪರಿಟ ನಿರ್ವಹಿಸಿದರು.

ಆರೋಗ್ಯ ವಾಹಿನಿ

ಈಐಡಿ ಪ್ಯಾರಿ ಲಿ.ನ ಮುಖ್ಯಸ್ಥ ಜೆ. ವೆಂಕಟರಾವ್ ಮಾತನಾಡಿ, ಈಐಡಿ ಪ್ಯಾರಿ ಹಾಗೂ ವಕಾರ್ಡ್ ಸಂಸ್ಥೆಯಿಂದ ದೊಡ್ಡಕೊಪ್ಪ ಮತ್ತು ಬಂಟರಗಾಳಿ ಗ್ರಾಮಗಳಲ್ಲಿ ವಾರದಲ್ಲಿ ಒಂದು ದಿನ ಸಂಚಾರಿ ಆರೋಗ್ಯ ವಾಹಿನಿಯನ್ನು ಆರಂಭಿಸಲಾಗಿದೆ. ಇದರಿಂದ ಆರೋಗ್ಯ ಸೇವೆಯಿಂದ ವಂಚಿತರಾದ ಸಮುದಾಯಕ್ಕೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *