ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಮುಂಡಗೋಡ: ತಾಲೂಕಿನ ಹೊಸ ಸಾಲಗಾಂವ ಮತ್ತು ಕರಗಿನಕೊಪ್ಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಅಲ್ಲಿ ನಿತ್ಯ ಮೂರು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ತಹಸೀಲ್ದಾರ್ ಶಂಕರ ಗೌಡಿ ತಿಳಿಸಿದ್ದಾರೆ.

ತಾಲೂಕಿನ ಚವಡಳ್ಳಿ, ತೇಗಿನಕೊಪ್ಪ, ನಂದಿಪುರ ಮತ್ತು ಆಲಳ್ಳಿ ಗ್ರಾಮಗಳಿಗೆ ಖಾಸಗಿ ಬೋರ್​ವೆಲ್​ಗಳಿಂದ ನೀರು ಪಡೆದು ಪೂರೈಸಲಾಗುತ್ತಿದೆ. ಬೋರ್​ವೆಲ್​ಗಳ ಮಾಲೀಕರಿಗೆ ತಹಸೀಲ್ದಾರರ ಖಾತೆಯಿಂದ ಹಣ ನೀಡಲಾಗುತ್ತಿದೆ. ಚಿಗಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದು, ಅಲ್ಲಿ ಸದ್ಯಕ್ಕೆ ಸರ್ಕಾರಿ ಬೋರ್​ವೆಲ್​ಗಳನ್ನು ಪುನಃಶ್ಚೇತನಗೊಳಿಸುವ ಮತ್ತು ಖಾಸಗಿ ಬೋರ್​ವೆಲ್​ಗಳನ್ನು ಬಾಡಿಗೆ ಪಡೆಯುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳಲ್ಲಿ ಖಾಸಗಿ ಬೋರ್​ವೆಲ್​ಗಳನ್ನು ಗುರುತಿಸಲಾಗಿದೆ. ನೀರಿನ ಸಮಸ್ಯೆ ಕಂಡು ಬಂದಲ್ಲಿ ಗ್ರಾಮಸ್ಥರು ಪಿಡಿಒ, ಗ್ರಾಮ ಲೆಕ್ಕಿಗರಿಗೆ ತಿಳಿಸಬಹುದು. ನೇರವಾಗಿ ತಮ್ಮ ಗಮನಕ್ಕೆ ತರಬಹುದು ಎಂದು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಗಳ್ಳಿ ಗ್ರಾಮದಲ್ಲಿ ಸರ್ಕಾರಿ ಮತ್ತು ಖಾಸಗಿ ಬೋರ್​ವೆಲ್​ಗಳಿಂದ ಸಿಂಟೆಕ್ಸ್​ಗಳಿಗೆ ನೀರು ತುಂಬಿ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ.

Leave a Reply

Your email address will not be published. Required fields are marked *