ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಸಹಿಸದ ಕಿಡಿಗೇಡಿಗಳು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಮಾನ ಮಾಡುವುದಕ್ಕಾಗಿ ಹಳ್ಳಿಗಳಲ್ಲಿ ವ್ಯಂಗ್ಯ ಬ್ಯಾನರ್ ಅಳವಡಿಸಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣಾಧಿಕಾರಿಗೆ ಭಾನುವಾರ ಮನವಿ ಸಲ್ಲಿಸಿದ ಕಾರ್ಯಕರ್ತರು, ಹಲಗಾ ಜಿಪಂ ಹಾಗೂ ಹಿರೇಬಾಗೇವಾಡಿ ಜಿಪಂ ವ್ಯಾಪ್ತಿಯ
20ಕ್ಕೂ ಹೆಚ್ಚು ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಬೆಳಗಾವಿ ನಗರಾಭಿವದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತ ಮಾರಿಹಾಳಕರ್, ನಾಮದೇವ ಜೋಗಣ್ಣವರ, ರಾಮಾ ಕಾಕತ್ಕರ್, ಪ್ರಮೋದ ಜಾಧವ, ಲಕ್ಷ್ಮಣ ಮುಚ್ಚಂಡಿ, ಈರಪ್ಪ ಬೊಮ್ಮಣ್ಣವರ, ನಾಗಪ್ಪ ತಳವಾರ, ನಾಗಯ್ಯ ಪೂಜಾರಿ, ಮಹಾವೀರ ಪಾಟೀಲ, ಮನೋಹರ ಬಾಂಡಗೆ, ಅರ್ಜುನಗೌಡ ಪಾಟೀಲ, ಬಾಳು ಪಾಟೀಲ, ದಿಲೀಪ ಕೊಂಡುಸ್ಕೊಪ್ಪ, ರಾಜು ಜಾಧವ, ಬಸವರಾಜ ತಳವಾರ, ಬಸವರಾಜ ವಾಣಿ, ಸುಕುಮಾರ ಹುಡೇದ, ಶಾಂತು ಬೆಲ್ಲದ, ವಿಶ್ವನಾಥ ಕಿಳ್ಳಿಕೇತರ, ಮನೋಹರ ಮುಚ್ಚಂಡಿ ಇತರರು ಇದ್ದರು.