ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮಚ್ಚಿನಿಂದ ಹಲ್ಲೆ

ಶಿವಮೊಗ್ಗ: ಭದ್ರಾವತಿಯಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಭದ್ರಾವತಿಯ ರುದ್ರೇಶ್ ಹಾಗೂ ಗೋಪಿ ಗಾಯಗೊಂಡವರು. ಶರತ್, ವಿಶ್ವ ಅಲಿಯಾಸ್ ಮುದ್ದೆ, ವಿನಯ, ಸುನೀಲ , ಮಲ್ಲಿಕಾ ತೇಜ, ರಾಜೇಶ್ ಹಲ್ಲೆ ನಡೆಸಿದವರು. ರುದ್ರೇಶ್ ಮತ್ತು ಗೋಪಿ ಪಟ್ಟಣದ ಹೊಸ ಸೇತುವೆ ಬಳಿ ಬನಶಂಕರಿ ದೇವಾಲಯದ ಮುಂಭಾಗ ತಡ ರಾತ್ರಿ ಬೈಕ್​ನಲ್ಲಿ ಬರುವಾಗ ಬೈಕ್​ಗಳಲ್ಲಿ ಅಡ್ಡಗಟ್ಟಿದ್ದು, ಏಕಾಏಕಿ ಮಚ್ಚಿನಿಂದ ಗೋಪಿ ಬೆನ್ನಿಗೆ ಹಾಗೂ ರುದ್ರೇಶ್ ಕೈ-ಕಾಲಿನ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಇಬ್ಬರು ಕೂಗಾಡುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಕೀಯ ದ್ವೇಷದಿಂದ ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.