More

    ಹಳೇ ಬಸ್ ನಿಲ್ದಾಣ ತುಂಬ ಕೊಳೆ

    ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಗುತ್ತಿಗೆ ಸ್ವಚ್ಛತಾ ಕಾರ್ವಿುಕರು ಕೆಲಸ ಸ್ಥಗಿತಗೊಳಿಸಿ ಶನಿವಾರ ನಡೆಸಿದ ಪ್ರತಿಭಟನೆಯಿಂದಾಗಿ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಇಡೀ ದಿನ ಎಲ್ಲೆಂದರಲ್ಲಿ ಕಸ ಬಿದ್ದಿತ್ತು.

    ನಿಲ್ದಾಣ ಆವರಣದ ಉದ್ದಗಲಕ್ಕೂ ಕಸ ಹರಡಿದ್ದು, ಪ್ರಯಾಣಿಕರ ಮೇಲೆ ಹಾರಾಡುತ್ತಿತ್ತು.

    ವಾಯವ್ಯ ಸಾರಿಗೆ ಸಂಸ್ಥೆ ಹಳೇ ಬಸ್ ನಿಲ್ದಾಣದ ಗುತ್ತಿಗೆಯನ್ನು ರಾಮಪ್ಪ ಬಿಜಾಪುರ ಎಂಬುವವರಿಗೆ ನೀಡಿದ್ದು, ಅವರು ಸಂಬಳವನ್ನು ಪೂರ್ಣ ಪ್ರಮಾಣದಲ್ಲಿ ನೀಡುತ್ತಿಲ್ಲ. ಇಎಸ್​ಐ, ಪಿಎಫ್ ಸೌಲಭ್ಯ ಒದಗಿಸುತ್ತಿಲ್ಲ. ಈ ಕುರಿತು ಪ್ರಶ್ನಿಸಿದ ಸೂಪರ್​ವೈಸರ್ ರಘು ಪಾಮಡಿ ಎಂಬುವವರನ್ನು ಕೆಲಸದಿಂದ ತೆಗೆದಿದ್ದು, ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಕಾರ್ವಿುಕ ಇಲಾಖೆಯಲ್ಲಿ ತಮಗೆ 15 ಸಾವಿರ ರೂ. ಸಂಬಳ ನೀಡಲಾಗುತ್ತಿದೆ ಎಂಬ ದಾಖಲೆ ತೋರಿಸಲಾಗಿದೆ. ಆದರೆ, ಕೇವಲ 7 ಸಾವಿರ ರೂ. ಸಂಬಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

    ಸಮರ್ಪಕ ಸಂಬಳ ನೀಡುವವರೆಗೆ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದಿಲ್ಲ ಎಂದು ಪಟ್ಟುಹಿಡಿದರು.

    ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದವರು ಕಾರ್ವಿುಕರಿಗೆ ಎಷ್ಟು ಸಂಬಳ ನೀಡುತ್ತಾರೆಂಬುದು ನಮಗೆ ಸಂಬಂಧ ಇಲ್ಲದ ವಿಷಯ. ಮಧ್ಯಾಹ್ನದ ನಂತರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡಲಾಗಿದೆ.

    -ರಾಮನಗೌಡರ, ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ

    ಸ್ವಚ್ಛತಾ ಕಾರ್ವಿುಕರಿಗೆ 15 ಸಾವಿರ ರೂ. ನೀಡಲಾಗುತ್ತದೆ ಎಂದು ಸಹಿ ಮಾಡುವಂತೆ ಗುತ್ತಿಗೆದಾರರು ನೀಡಿದ್ದ ಸೂಚನೆ ಪಾಲಿಸಲಿಲ್ಲ. ಇದರಿಂದಾಗಿ ನನ್ನನ್ನು ಕೆಲಸದಿಂದ ತೆಗೆಯಲಾಗಿದೆ. ಪೂರ್ಣ ಪ್ರಮಾಣದ ಸಂಬಳ ಪಾವತಿಸಬೇಕು. 14 ಕಾರ್ವಿುಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

    -ರಘು ಪಾಮಡಿ, ಸ್ವಚ್ಛತಾ ಕೆಲಸದ ಸೂಪರ್​ವೈಸರ್ ಆಗಿದ್ದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts