ಹಳೇಬೀಡು ಕೆರೆಗೆ ನೀರು ಹರಿಸುವ ಕೇಶವಪುರ ಜಾಕ್ವೆಲ್ ಪಂಪ್​​ಗೆ ಚಾಲನೆ

ಹಗರೆ: ಹಳೇಬೀಡಿನ ದ್ವಾರ ಸಮುದ್ರ ಕೆರೆಗೆ ನೀರು ತುಂಬಿಸುವ ಯಗಚಿ ಏತನೀರಾವರಿಯ ಯೋಜನೆಗಾಗಿ ಸ್ಥಾಪಿಸಿರುವ ಮಾದೀಹಳ್ಳಿ ಕೇಶವಪುರದ ಜಾಕ್ ವೆಲ್ ಪಂಪ್ ಅನ್ನು ಬುಧವಾರ ಚಾಲನೆ ಮಾಡಲಾಯಿತು.

ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೋಟರ್ ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಯಗಚಿ ನಾಲೆಯಿಂದ ದ್ವಾರ ಸಮುದ್ರ ಕರೆಗೆ ನೀನು ಹರಿಸುವ ಕಾರ್ಯ ಆರಂಭವಾಗಿದ್ದು ಶೀಘ್ರವೇ ಕೆರೆ ಭರ್ತಿಯಾಗುವ ಭರವಸೆ ಮೂಡಿದೆ.

ಶಾಸಕ ಕೆ.ಎಸ್. ಲಿಂಗೇಶ್, ಜಿಲ್ಲಾ ಪಂ.ಸದಸ್ಯೆ ಲತಾ ದಿಲೀಪ್ ಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *