More

    ಹಳೇಬೀಡಿನ ವಿಠ್ಠಲ-ರುಕುಮಾಯಿ ದೇಗುಲದಲ್ಲಿ ವೈಕುಂಠ ಏಕಾದಶಿ ಆಚರಣೆ

    ಹಳೇಬೀಡು: ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ವಿಠ್ಠಲ ರುಕುಮಾಯಿ ದೇಗುಲದಲ್ಲಿ ವಿಶೇಷ ಪೂಜೆ ನಡೆಸಲಾಯಿತು.

    ಸೋಮವಾರ ಬೆಳಗಿನ ಜಾವದಿಂದಲೆ ದೇವರಿಗೆ ಪಂಚಾಮೃತ ಅಭಿಷೇಕ , ಸೂಕ್ತಾಭಿಷೇಕಗಳು ಜರುಗಿತು. ಭಕ್ತಾದಿಗಳು ಸಂತ ಜ್ಞಾನದೇವ ಹಾಗೂ ತುಕಾರಾಮರ ಅಭಂಗ ಗೀತೆಗಳನ್ನು ಹಾಡಿ ಸೇವೆ ಸಲ್ಲಿಸಿದರು. ವಿಶೇಷ ಅಲಂಕಾರದ ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು.

    ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು. ಇಂದು ಸಂಜೆ ವೈಕುಂಠದ್ವಾರ ಪೂಜೆ ಹಾಗೂ ಪ್ರವೇಶ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಗುಲ ಸಮಿತಿಯ ಖಜಾಂಚಿ ಬಾಬುರಾವ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts