16 C
Bangalore
Saturday, December 7, 2019

ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಹಳಿಯಾಳ: ರಣಭೀಕರ ಮಳೆಯಿಂದ ತತ್ತರಿಸಿದ್ದ ಹಳಿಯಾಳಕ್ಕೆ ಈಗ ಜೀವಜಲದ ಸಮಸ್ಯೆ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.

ತಾಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ರೌದ್ರಾವತಾರ ತಾಳಿದಂತೆ ಆರ್ಭಟಿಸುತ್ತ ದಾರಿಗೆ ಬಂದಿದ್ದನ್ನು ಒಡಲಲ್ಲಿ ತುಂಬಿಕೊಂಡು, ಬರದಿದ್ದನ್ನು ಕೊಚ್ಚಿಕೊಂಡು ಹರಿದ ತಟ್ಟಿಹಳ್ಳ ತನ್ನ ಎಂದಿನ ಸಹಜ ಸ್ಥಿತಿಗೆ ಮರಳಿದೆ. ಇದೆಲ್ಲದರ ನಡುವೆ ಹಳಿಯಾಳ ಪಟ್ಟಣಕ್ಕೆ ನೀರಿನ ಸಮಸ್ಯೆ ತಲೆದೋರಿದೆ.

ಕೊಚ್ಚಿ ಹೋಯಿತು ಫೈಪ್: ಪಟ್ಟಣಕ್ಕೆ ದಾಂಡೇಲಿಯ ಕಾಳಿ ನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು, ಆ. 6ರಂದು ಹಳಿಯಾಳ ತಾಲೂಕಿನಾದ್ಯಂತ ಸುರಿದ ಆಶ್ಲೇಷ ಮಳೆ ಹಾಗೂ ತಾಲೂಕಿನೆಲ್ಲೆಡೆ ಉಕ್ಕಿಹರಿದ ತಟ್ಟಿಹಳ್ಳದ ಪ್ರವಾಹಕ್ಕೆ ಹಲವಾರು ಸೇತುವೆಗಳು ಮುಳುಗಡೆಯಾದರೇ, ಮೂರು ಸೇತುವೆಗಳು ಕೊಚ್ಚಿ ಹೋಗಿವೆ. ಹೀಗೆ ತಟ್ಟಿಹಳ್ಳ ರಭಸಕ್ಕೆ ಕೆಸರೊಳ್ಳಿ ಸೇತುವೆ ಪಕ್ಕದಲ್ಲಿ ಅಳವಡಿಸಿದ್ದ ಸಕ್ಕರೆ ಕಾರ್ಖಾನೆಗೆ ದಾಂಡೇಲಿಯ ಕಾಳಿ ನದಿಯಿಂದ ನೀರು ಪೂರೈಸುವ ಪೈಪ್ ಕಿತ್ತು ಕೊಚ್ಚಿ ಹೋಯಿತು. ಮತ್ತೊಂದೆಡೆ ಯಡೋಗಾ ಗ್ರಾಮ ಸಂರ್ಪಸುವ ಹಳೆಯ ಸೇತುವೆಗುಂಟ ಅಳವಡಿಸಿದ್ದ ಕಾಳಿ ನದಿಯಿಂದ ಕುಡಿಯುವ ನೀರು ಪೂರೈಸುವ ಪೈಪ್ ಹಾಗೂ ಸೇತುವೆ ಕೊಚ್ಚಿ ಹೋಗಿದೆ.

ಬಳಕೆಗೆ ಮಳೆ ನೀರು ಸಂಗ್ರಹ ಕುಡಿಯುವ ನೀರನ್ನು ಪೂರೈಸುವ ಪೈಪ್ ಕೊಚ್ಚಿ ಹೋಗಿದ್ದರಿಂದ ಹಳಿಯಾಳ ಪಟ್ಟಣಕ್ಕೆ ಈಗ ನೀರು ಪೂರೈಕೆ ಸ್ಥಗಿತಗೊಂಡು ಆರು ದಿನಗಳಾಗುತ್ತಿದೆ. ಕಳೆದ ವಾರ ಇಡೀ ಮಳೆಯ ನೀರನ್ನು ಸಂಗ್ರಹಿಸಿ ಗೃಹ ಬಳಕೆಗೆ ಬಳಸುತ್ತಿದ್ದ ಪಟ್ಟಣ ವಾಸಿಗಳಿಗೆ ಈ ಕುಡಿಯುವ ನೀರಿನ ಬಿಸಿ ಮುಟ್ಟಿದೆ. ಮನೆಯ ನಲ್ಲಿಯಲ್ಲಿ ನಿರಂತರ ನೀರು ಕಂಡಿದ್ದವರಿಗೆ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಆಕಾಶವೇ ಕಳಚಿ ಬಿದ್ದಂತಾಗಿದೆ. ಇಲ್ಲಿಯ ಪುರಸಭೆ ಮತ್ತು ಅರ್ಬನ್ ಬ್ಯಾಂಕ್ ಬಳಿಯಿರುವ ಶುದ್ಧ ಕುಡಿಯುವ ನೀರಿನ ಕೇಂದ್ರಗಳಿಗೆ ಜನರು ಮುಗಿ ಬಿದ್ದಿದ್ದು, ಸರದಿಯಲ್ಲಿ ನಿಂತು ನೀರನ್ನು ಒಯ್ಯತ್ತಿದ್ದಾರೆ.

ಇನ್ನೊಂದು ವಾರ ಇದೇ ಸ್ಥಿತಿ ನೀರಿನ ಪೈಪ್ ಕೊಚ್ಚಿ ಹೋಗಿದ್ದರಿಂದ ಹೊಸ ಪೈಪ್​ಗಳನ್ನು ಕೊಳ್ಳಲು ಶಾಸಕರು ಅನುಮೋದನೆ ನೀಡಿ ಶೀಘ್ರ ಪೈಪ್ ಅಳವಡಿಸಿ ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ಆದೇಶಿದ್ದಾರೆ. ಈ ದಿಸೆಯಲ್ಲಿ ಹೊಸ ಪೈಪ್ ಖರೀದಿ ಹಾಗೂ ಅಳವಡಿಕೆಗೆ ಜಿಲ್ಲಾಡಳಿತ 13.75 ಲಕ್ಷ ರೂ. ಬಿಡುಗಡೆ ಮಾಡಿದೆ. ಸದ್ಯ ಪುರಸಭೆಯು ರೋಣದಿಂದ ಖರೀದಿಸಿ ತಂದ 20 ಪೈಪಗಳ ಲೋಡ್ ಹಳಿಯಾಳಕ್ಕೆ ಶನಿವಾರ ರಾತ್ರಿ ಬಂದಿದೆ. ಹೊಸ ಪೈಪ್​ಗಳನ್ನು ಅಳವಡಿಸಿ ನೀರು ಪೂರೈಕೆ ಆರಂಭಗೊಳ್ಳಲು ಇನ್ನೊಂದು ವಾರ ಬೇಕಾಗಬಹುದು ಎಂದು ಪುರಸಭೆ ಹೇಳುತ್ತಿದೆ.

ಹಳೆಯ ಸೇತುವೆಯು ಶಿಥಿಲಗೊಂಡಿದ್ದು, ಹಳ್ಳದಲ್ಲಿ ನೀರಿನ ಮಟ್ಟ ಇಳಿದಿಲ್ಲದಿರುವುದರಿಂದ ಹೊಸ ಸೇತುವೆಯ ಮೇಲಿನಿಂದ ನೀರಿನ ಪೈಪ್​ಗಳನ್ನು ಆಳವಡಿಸುತ್ತೇವೆ. ಆದಷ್ಟು ಬೇಗ ಪಟ್ಟಣಕ್ಕೆ ನೀರು ಪೂರೈಸಲು ಪುರಸಭೆಯು ಶ್ರಮಿಸುತ್ತಿದೆ. | ಹರೀಶ ಜಿ.ಆರ್., ಪುರಸಭಾ ಇಂಜಿನಿಯರ್

ತಟ್ಟಿಹಳ್ಳದ ಪ್ರವಾಹಕ್ಕೆ ಹಳಿಯಾಳಕ್ಕೆ ನೀರು ಪೂರೈಸುವ ಪೈಪ್ ಕಿತ್ತು ಹೋಗಿದ್ದು ಆಕಸ್ಮಿಕ ಘಟನೆ. ಹೊಸ ಪೈಪ್ ಅಳವಡಿಸುವವರೆಗೂ ಪಟ್ಟಣಕ್ಕೆ ವಾರ್ಡ್​ವಾರು ಜನರ ಬೇಡಿಕೆಯಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. | ಕೇಶವ ಚೌಗಲೆ ಪುರಸಭೆ ಮುಖ್ಯಾಧಿಕಾರಿ

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...