ಹಳಿಯಾಳಕ್ಕೆ ಮತ್ತೊಂದು ಗರಿ!

Latest News

24 ಗಂಟೆಯೊಳಗೆ ಕುರಿಯ ಡಬಲ್ ಮರ್ಡರ್ ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು

ವಿಜಯವಾಣಿ ಸುದ್ದಿಜಾಲ ಪುತ್ತೂರು ನ.19 ರಂದು ಬೆಳಗ್ಗೆ ಬೆಳಕಿಗೆ ಬಂದ ಜೋಡಿ ಕೊಲೆ ಕೃತ್ಯದ ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ...

ಮಾಜಿ ಸಿಎಂ ಸಿದ್ದು ವಿರುದ್ಧ ಗುಡುಗಿದ ಸಿಎಂ ಬಿಎಸ್​ವೈ ಸಂಸದೆ ಸುಮಲತಾ ಬೆಂಬಲ ಕುರಿತು ಹೇಳಿದ್ದು ಹೀಗೆ…

ಬೆಂಗಳೂರು: ಉಪಚುನಾವಣೆಯ ಕದನ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ಹಾಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ...

ಶಾಸಕ ತನ್ವೀರ್​ ಸೇಠ್​ಗೆ ಭದ್ರತೆ ಹೆಚ್ಚಳ ಮಾಡಿದ ಸರ್ಕಾರ: 24 ತಾಸು 3 ಪಾಳಿಗಳಲ್ಲಿ ಗನ್​ಮ್ಯಾನ್​ ಭದ್ರತೆ

ಮೈಸೂರು: ತೀವ್ರ ಹಲ್ಲೆ ಹಿನ್ನೆಲೆಯಲ್ಲಿ ಶಾಸಕ ತನ್ವೀರ್​ ಸೇಠ್​ಗೆ ಒದಗಿಸಿದ್ದ ಭದ್ರತೆಯನ್ನು ಮೂರುಪಟ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಿನದ 24 ತಾಸು...

ಸಿನಿಮಾದಂತೆ ರಾಜಕೀಯದಲ್ಲೂ ಮೋಡಿ ಮಾಡಲು ರಜಿನಿ-ಕಮಲ್​ ಸಜ್ಜು: ತ.ನಾಡು ಪಾಲಿಟಿಕ್ಸ್​ ಬಗ್ಗೆ ಮಹತ್ತರ ಸುಳಿವು ನೀಡಿದ ನಟದ್ವಯರು!

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಕಾಣುತ್ತಿದೆ. ಅದಕ್ಕೆ ಕಾರಣ ನಟನೆಯಿಂದ ರಾಜಕೀಯಕ್ಕೂ ಹೊರಳಿರುವ ರಜನಿಕಾಂತ್​ ಮತ್ತು ಕಮಲ್​ ಹಾಸನ್​ ಎಂಬುದೇ...

ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್ ಹಗರಣ: ಇಂದು 7 ತಂಡಗಳ ಮಾಲೀಕರ ವಿಚಾರಣೆ ನಡೆಸಲಿರುವ ಸಿಸಿಬಿ

ಬೆಂಗಳೂರು: ಕರ್ನಾಟಕ ಪ್ರಿಮೀಯರ್​ ಲೀಗ್​ ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ ಹಗರಣದ ವಿಚಾರಣೆಗೆ 7 ತಂಡಗಳ ಮಾಲೀಕರು ಇಂದು ಹಾಜರಾಗಲಿದ್ದಾರೆ. ಕೆಪಿಎಲ್​ನ 7 ತಂಡಗಳ ಮಾಲೀಕರು...

ವಿಜಯವಾಣಿ ಸುದ್ದಿಜಾಲ ಹಳಿಯಾಳ

ದಿನದ ಇಪ್ಪತ್ತನಾಲ್ಕು ಗಂಟೆ ಕುಡಿಯುವ ನೀರು ಪೂರೈಸುವ ಶಾಶ್ವತ ಯೋಜನೆಯ ನಂತರ ಈಗ ನೈರ್ಮಲ್ಯ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಹಳಿಯಾಳ ಪಟ್ಟಣಕ್ಕೆ 76.20 ಕೋಟಿ ರೂ. ಅನುದಾನದ ಒಳಚರಂಡಿ ಯೋಜನೆ ಮಂಜೂರಾಗಿದ್ದು, ಮಳೆಗಾಲದ ನಂತರ ಈ ಯೋಜನೆ ಅನುಷ್ಠಾನ ಕಾರ್ಯ ಆರಂಭಗೊಳ್ಳಲಿದೆ.

ಒಳಚರಂಡಿ ಯೋಜನೆ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ವಿಶೇಷ ಆಸಕ್ತಿ ವಹಿಸಿ ಈ ಒಳಚರಂಡಿ (ಯುಜಿಡಿ) ಯೋಜನೆಯನ್ನು ಮಂಜೂರು ಮಾಡಿ 76.20 ಕೋಟಿ ರೂ. ಅನುದಾನವನ್ನು ಯೋಜನೆಗೆ ಮೀಸಲಾಗಿಟ್ಟಿದ್ದಾರೆ. ಯೋಜನೆಯ ಅನುಷ್ಠಾನ ಹಾಗೂ ನಿರ್ವಹಣೆ ಹೊಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಿದೆ. ಯೋಜನೆ ಮೊದಲ ಹಂತದ 44 ಕೋಟಿ ರೂ. ವೆಚ್ಚದ ಕಾಮಗಾರಿ ಟೆಂಡರ್​ಗೆ ಧಾರವಾಡದ ಸುಪ್ರದಾ ಕನ್​ಸ್ಟ್ರಕ್ಸನ್ ಪ್ರೈವೆಟ್ ಲಿಮಿಟೆಡ್ ಕಂಪನಿಯವರು ಕಡಿಮೆ ಮೊತ್ತದ 40.20 ಕೋಟಿ ರೂ. ಬಿಡ್ ಸಲ್ಲಿಸಿ ಟೆಂಡರ್ ಪಡೆದಿದ್ದಾರೆ. ಯೋಜನೆಯ ನೀಲಿನಕ್ಷೆ ರೂಪಿಸಲು ಈಗ ಪಟ್ಟಣದಲ್ಲಿ ಸುಪ್ರದಾ ಕಂಪನಿಯವರು ಪಟ್ಟಣದಲ್ಲಿನ ರಸ್ತೆಗಳ ಸಮೀಕ್ಷಾ ಕಾರ್ಯ ಆರಂಭಿಸಿದ್ದಾರೆ.

ಯೋಜನೆ ವ್ಯಾಪ್ತಿ: ಈ ಯೋಜನೆಯಲ್ಲಿ ಅಂದಾಜು 68 ಕಿ.ಮೀ. ಉದ್ದ ಒಳಚರಂಡಿಯ ನಿರ್ಮಾಣ ಕಾರ್ಯ ನಡೆಯಲಿದೆ. ಪಟ್ಟಣದಲ್ಲಿ 23 ವಾರ್ಡ್ ಗಳಿದ್ದು, ಒಟ್ಟು 45 ಓಣಿ ಹಾಗೂ 6200 ಮನೆಗಳಿವೆ. ಪ್ರತಿ ಓಣಿಯಲ್ಲಿ ಹತ್ತರಿಂದ ಹದಿನೈದು ಮೀಟರ್ ಅಂತರದಲ್ಲಿ (ಜಮೀನಿನ ಏರು-ಇಳಿಜಾರನ್ನು ಆಧರಿಸಿ) ಮ್ಯಾನ್​ಹೋಲ್ ಚೇಂಬರ್ ನಿರ್ವಿುಸಲಾಗುವುದು. ಈ ಚೇಂಬರ್​ಗೆ ಪ್ರತಿ ಮನೆಯ ಶೌಚಗೃಹ ಮತ್ತು ಬಚ್ಚಲು ಮನೆಯ ತ್ಯಾಜ್ಯ ನೀರು ಸರಾಗವಾಗಿ ಸಾಗಿಸಲು ಎಲ್ಲರ ಮನೆಗೂ ಚಿಕ್ಕ ಚೇಂಬರ್​ನಿರ್ವಿುಸುವ ಕಾರ್ಯ ಗುತ್ತಿಗೆದಾರರೇ ಮಾಡಲಿದ್ದಾರೆ. ಪ್ರತಿ ಮುಖ್ಯ ಚೇಂಬರಿಗೆ ಹತ್ತರಿಂದ ಹದಿನೈದು ಮನೆಗಳ ಚರಂಡಿ ಪೈಪ್​ಲೈನ್ ಜೋಡಣೆ ಮಾಡಲಾಗುವುದು. ಇನ್ನು ಈ ಯೋಜನೆಯಲ್ಲಿ ಸಾರ್ವಜನಿಕರು ತಮ್ಮ ಮನೆಯ ಚೇಂಬರಿಗೆ ಟಾಯ್ಲೆಟ್ ಮತ್ತು ತ್ಯಾಜ್ಯ ನೀರು ಹೋಗಲು ಪೈಪ್​ಲೈನ್ ಅಳವಡಿಸಿಕೊಡಬೇಕು. ಒಳಚರಂಡಿ ಮೂಲಕ ಸಂಗ್ರಹವಾಗುವ ಪಟ್ಟಣದ ತ್ಯಾಜ್ಯವನ್ನು ಸಂಸ್ಕರಿಸಲು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಬ್ಲಿಕೊಪ್ಪ ಬಳಿ ನಿರ್ವಿುಸಲಾಗುವುದು. ಈ ಸಂಸ್ಕರಣಾ ಘಟಕದಲ್ಲಿ ಸಿಗುವಂಥ ನೀರನ್ನು ಸಮೀಪದ ಹೊಲಗದ್ದೆಗಳಿಗೆ ಬಳಸಲು ಯೋಜಿಸಲು ವಿಶೇಷ ಯೋಜನೆ ರೂಪಿಸಲಾಗುತ್ತಿದೆ.

ಪಟ್ಟಣ ನವೀಕರಣ: ಪಟ್ಟಣದಲ್ಲಿ ಸಿ.ಸಿ. ರಸ್ತೆ ಮತ್ತು ಡಾಂಬರ್ ರಸ್ತೆಗಳಿವೆ. ಈ ಯೋಜನೆ ಅನುಷ್ಠಾನ ಕಾರ್ಯ ಆರಂಭವಾದ ನಂತರ ಇಡೀ ಪಟ್ಟಣದ ರಸ್ತೆ ಅಗೆಯಲಾಗುವುದು. ಕನಿಷ್ಠ 4 ರಿಂದ 5 ಅಡಿ ಆಳ ಇಲ್ಲವೆ ಜಮೀನು ಇಳಿಜಾರು ಆಧರಿಸಿ ಇನ್ನೂ ಆಳ ರಸ್ತೆಯನ್ನು ಅಗೆಯುವ ಸಾಧ್ಯತೆಗಳಿವೆ. ಒಳಚರಂಡಿ ಯೋಜನೆಗೆ ಪಟ್ಟಣದಲ್ಲಿನ ಎಲ್ಲ ಮನೆ ಇತ್ಯಾದಿಗಳ ಜೋಡಣೆ ಮಾಡಿದ ನಂತರ ರಸ್ತೆ ದುರಸ್ತಿ ಇಲ್ಲವೇ ಡಾಂಬರೀಕರಣ ಕಾರ್ಯ ಆರಂಭವಾಗುವುದು. ಒಟ್ಟಾರೆ, ಈ ಯೋಜನೆಯಡಿ ಹೊಸ ರಸ್ತೆಗಳ ನಿರ್ವಣದ ಮೂಲಕ ಮತ್ತೊಮ್ಮೆ ಪಟ್ಟಣ ನವೀಕರಣಗೊಳ್ಳಲಿದೆ.

ಈ ಯೋಜನೆಗೆ ಸಂಬಂಧಿಸಿದ ಸಾಮಗ್ರಿ ಸಂಗ್ರಹಿಸಿಡಲು, ಕಾರ್ವಿುಕರಿಗೆ ನಿವಾಸ, ಯೋಜನೆ ಕಚೇರಿ ಇತ್ಯಾದಿ ಕಾರ್ಯಗಳಿಗಾಗಿ ಹೊಸ ಬಸ್ ಡಿಪೋ ಬಳಿ ಸ್ಥಳ ಗುರುತಿಸಲಾಗಿದೆ. ಮಳೆ ಬಿಡುವು ಕೊಟ್ಟ ನಂತರ ಇನ್ನೆರೆಡು ತಿಂಗಳಲ್ಲಿ ಯೋಜನೆಯ ಕಾರ್ಯ ಆರಂಭವಾಗುವುದು. | ಪ್ರಕಾಶ ಕಾರ್ಯನಿರ್ವಾಹಕ ಇಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

- Advertisement -

Stay connected

278,614FansLike
572FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಹೆಬ್ಬಾವು-ಚಿರತೆ ನಡುವಿನ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...