ಹರಿಹರಪುರ ಪುರಾಣೋಕ್ತ ಮಹಾಕ್ಷೇತ್ರ

| ಬಿ.ಎಸ್. ರವಿಶಂಕರ್

ಜ್ವಲ ಪೌರಾಣಿಕ, ಐತಿಹಾಸಿಕ ಪರಂಪರೆಯುಳ್ಳಂಥದ್ದು ಶ್ರೀಕ್ಷೇತ್ರ ಹರಿಹರಪುರ. ಇಲ್ಲಿನ ಅಗಸ್ಱ ಕರಾರ್ಚಿತ ಶ್ರೀ ಲಕ್ಷ್ಮೀನೃಸಿಂಹ ಸ್ವಾಮಿ ದೇವಾಲಯದ ಪುನರ್ನಿರ್ವಣ ಕಾರ್ಯವು ಮುಕ್ತಾಯದ ಹಂತದಲ್ಲಿದೆ. 2018ಕ್ಕೆ ಮಹಾಕುಂಭಾಭಿಷೇಕ ನಡೆಸಲು ಸಂಕಲ್ಪಿಸಿದ್ದು; ಈ ಸಂದರ್ಭದಲ್ಲಿ 40 ಸಾವಿರಕ್ಕೂ ಹೆಚ್ಚು ಮಾತೆಯರು ಏಕಕಂಠದಲ್ಲಿ ಶ್ರೀಲಕ್ಷ್ಮೀನೃಸಿಂಹ ಸಹಸ್ರನಾಮ ಪಾರಾಯಣವನ್ನು ಕೋಟಿ ತುಳಸಿ ಅರ್ಚನೆಯ ಮೂಲಕ ಭಗವಂತನಿಗೆ ಸಮರ್ಪಣೆ ಮಾಡಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಇದೇ 28ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹತ್ತು ಸಾವಿರ ಮಾತೆಯರಿಂದ ಶ್ರೀ ಲಕ್ಷೀನೃಸಿಂಹ ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ.

ಸಾವಿರಾರು ವರ್ಷಗಳ ಭವ್ಯ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವಂಥದ್ದು ಹರಿಹರಪುರ ಕ್ಷೇತ್ರ. ಈ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿದೆ. ಪವಿತ್ರ ತುಂಗಾನದಿಯ ತೀರದಲ್ಲಿರುವ ಈ ಕ್ಷೇತ್ರವು ಸ್ಕಾಂದಪುರಾಣದಂತೆ ದಕ್ಷಬ್ರಹ್ಮನ ಯಾಗಭೂಮಿಯಾಗಿದ್ದು, ಯಜ್ಞಕುಂಡದಲ್ಲೇ ಪರಶಿವನು ಆವಿರ್ಭವಿಸಿದ ಪುಣ್ಯಭೂಮಿಯಾಗಿದೆ. ಇಲ್ಲಿ ದಕ್ಷಹರ ಸೋಮೇಶ್ವರ ಸ್ವಾಮಿಯು ಇಂದಿಗೂ ಆರಾಧಿಸಲ್ಪಡುತ್ತಿದ್ದಾನೆ. ಇದು ಅಗಸ್ಱಮಹರ್ಷಿಗಳ ತಪೋಭೂಮಿಯೂ ಆಗಿದ್ದು, ಇಲ್ಲಿ ಅಗಸ್ಱರು ಶ್ರೀ ಲಕ್ಷ್ಮೀನೃಸಿಂಹಸ್ವಾಮಿಯನ್ನು ಆರಾಧಿಸುತ್ತ ಭಗವಂತನ ಪ್ರತ್ಯಕ್ಷ ಅನುಗ್ರಹವನ್ನು ಹೊಂದಿದರು. ಅಗಸ್ಱ ಕರಾರ್ಚಿತ ಲಕ್ಷ್ಮೀನೃಸಿಂಹ ಸಾಲಿಗ್ರಾಮ ಮೂರ್ತಿಗಳು ಗುರು-ಶಿಷ್ಯ ಪರಂಪರೆಯ ಮೂಲಕ ಇಂದಿಗೂ ಈ ಪೀಠಪರಂಪರೆಯಲ್ಲಿ ಆರಾಧಿಸಲ್ಪಡುತ್ತಿವೆ. ಮುಂದೆ ಈ ಪುಣ್ಯಭೂಮಿಯಲ್ಲಿ ಶ್ರೀ ಆದಿಶಂಕರರು ಸ್ವತಃ ಶಿಲೆಯ ಮೇಲೆ ಶ್ರೀಚಕ್ರ ಯಂತ್ರೋದ್ಧಾರವನ್ನು ಮಾಡಿ ಶ್ರೀ ಶಾರದಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸಿ ಈ ಪೀಠ ಪರಂಪರೆಗೆ ನಾಂದಿ ಹಾಡಿದರು.

ವಿಶ್ವಮಾನವ ತತ್ತ್ವವನ್ನು ಎತ್ತಿಹಿಡಿದ ಆದಿಶಂಕರರ ಅದ್ವೈತತತ್ವವನ್ನು ಯಥಾವತ್ತಾಗಿ ಪಾಲಿಸಿಕೊಂಡು ಬರುತ್ತಿರುವ ಈ ಧರ್ಮಪೀಠವು ಅಂದಿನಿಂದಲೂ ಆಯಾಯ ದೇಶ, ಕಾಲ ಪರಿಸ್ಥಿತಿಗೆ ತಕ್ಕಂತೆ ನಿರಂತರವಾಗಿ ಧರ್ಮಪ್ರಚಾರ ನಡೆಸುತ್ತಿದೆ. ಇಲ್ಲಿನ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಸಮಸ್ತ ಸನಾತನ ಹಿಂದುಧರ್ವಿುಗಳಲ್ಲಿ ಸಂಘಟನೆ, ಸ್ವಾಭಿಮಾನ, ಸಮಾನತೆ, ಸಾಮರಸ್ಯತೆ ಹಾಗೂ ಸಾತ್ವಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ‘ದೇವೀ ಉಪಾಸನಾ’, ‘ಶಿವದೀಕ್ಷಾ’ ಮುಂತಾದ ಅಭಿಯಾನಗಳನ್ನು ಹಮ್ಮಿಕೊಂಡು ದಕ್ಷಿಣ ಭಾರತದ ನಾನಾ ಕಡೆಗಳಲ್ಲಿ ನಿರಂತರವಾಗಿ ಸಂಚರಿಸುತ್ತ ಜನಸಾಮಾನ್ಯರಲ್ಲಿ ಧರ್ಮಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ. ಪ್ರಸ್ತುತ ಪೀಠಾಧಿಪತಿಗಳು ಸಮಾಜಮುಖಿಯಾಗಿ ಆಗಮಿಸುವ ಎಲ್ಲ ಭಕ್ತರಿಗೂ ಪರಿಹಾರಗಳನ್ನು ಸೂಚಿಸುತ್ತಾ, ಹಿಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಪರಿಸರ ರಕ್ಷಣೆ, ಗಿಡಮರಗಳ ಪೋಷಣೆ, ಪಶು ಪಕ್ಷಿ ಪ್ರಾಣಿಗಳಿಗೆ ಮೇವು, ಆಹಾರ ಮುಂತಾದವುಗಳನ್ನು ಶ್ರೀಮಠದ ವತಿಯಿಂದ ಏರ್ಪಾಡು ಮಾಡುತ್ತಿರುತ್ತಾರೆ. ಚಿಂತನೆಯಿಲ್ಲದ ಮಾನವನಿಂದ ಮಲಿನಗೊಳ್ಳುತ್ತಿರುವ ತುಂಗಾನದಿಯು ವಿಷಕಾರಿ ವಸ್ತುಗಳು ಒಳಗೊಂಡಿರುವುದನ್ನು ಮನಗಂಡು ಮಠದ ಸುತ್ತಮುತ್ತಲಿನ ಮನೆಯಿಂದ ಬರುವ ಕೊಳಚೆ ನೀರನ್ನು ಶ್ರೀಮಠದ ವತಿಯಿಂದ ಸಂಸ್ಕರಿಸಿ ನದಿಗೆ ಶುದ್ಧವಾದ ನೀರನ್ನು ಬಿಡುವ ಕಾರ್ಯವನ್ನು ಕೈಗೊಂಡಿದ್ದಾರೆ.

ತುಂಗಾನದಿಯಿಂದ ಸ್ವಾಮಿಯ ಸೇವೆಗೆ ನೀರು ತರಲು ಅನುಕೂಲ ಆಗುವಂತೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿರುವುದಲ್ಲದೆ, ಏಕಾಂತದಲ್ಲಿ ಪ್ರಶಾಂತ ವಾತಾವರಣದಲ್ಲಿ ಧ್ಯಾನಮಾಡಲು ಅನುಕೂಲವಾಗುವಂತೆ ಅಗಸ್ಱ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. 14 ಅಡಿ ಎತ್ತರದ ಭಕ್ತಾಂಜನೇಯಸ್ವಾಮಿಯ ವಿಗ್ರಹ ನಿರ್ವಣ, ಸುಮಾರು ಎರಡು ಸಾವಿರ ಮಂದಿ ಭಕ್ತಾದಿಗಳು ಏಕಕಾಲದಲ್ಲಿ ಕುಳಿತು ಪ್ರಸಾದ ಸ್ವೀಕಾರ ಮಾಡುವಂತಹ ಬೃಹತ್ ಲಕ್ಷ್ಮೀನೃಸಿಂಹ ಪ್ರಸಾದ ಮಂದಿರ, ಪರ ಊರುಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ವಸತಿ ನಿಲಯದ ನಿರ್ವಣವಾಗುತ್ತಿದೆ.

ಮಹಾಸ್ವಾಮಿಗಳು, ಶ್ರೀ ಶಾರದಾ ಶ್ರೀ ಲಕ್ಷ್ಮೀನೃಸಿಂಹಸ್ವಾಮಿಯ ಆಜ್ಞೆಯಂತೆ ಅಗಸ್ಱ ಕರಾರ್ಚಿತ ಶ್ರೀ ಲಕ್ಷ್ಮೀನೃಸಿಂಹ ಸ್ವಾಮಿ ದೇವಾಲಯದ ಪುನರ್ನಿರ್ವಣ ಕಾರ್ಯವನ್ನು ಆರಂಭಿಸಿದ್ದಾರೆ. ಶ್ರೀ ಶಾರದಾ ಪರಮೇಶ್ವರೀ, ಶ್ರೀ ಯಂತ್ರರಾಜ ವಜ್ರಸ್ತಂಭಜ ಲಕ್ಷ್ಮೀನೃಸಿಂಹ ಹಾಗೂ ಶ್ರೀ ಆದಿಶಂಕರರ ಸಾನ್ನಿಧ್ಯವನ್ನು ಒಳಗೊಂಡಿರುವ ಈ ದೇವಾಲಯವನ್ನು ಬಹು ವಿಶಿಷ್ಟ ರೀತಿಯಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ವಣ ಕಾರ್ಯವು 2009ರಿಂದ ಪ್ರಾರಂಭವಾಗಿದ್ದು, ಈಗ ಮುಕ್ತಾಯದ ಹಂತದಲ್ಲಿದೆ. 2018ಕ್ಕೆ ಮಹಾಕುಂಭಾಭಿಷೇಕವನ್ನು ನಡೆಸಲು ಸಂಕಲ್ಪಿಸಲಾಗಿದೆ.

ಮಹಾಕುಂಭಾಭಿಷೇಕದ ಸಂದರ್ಭದಲ್ಲಿ, ದಕ್ಷಿಣ ಭಾರತದ ಸುಮಾರು 40 ಸಾವಿರಕ್ಕೂ ಹೆಚ್ಚು ಮಾತೆಯರು ಶ್ರೀಕ್ಷೇತ್ರ ಹರಿಹರಪುರದಲ್ಲಿ ಏಕಕಂಠದಲ್ಲಿ ಶ್ರೀಲಕ್ಷ್ಮೀನೃಸಿಂಹ ಸಹಸ್ರನಾಮ ಪಾರಾಯಣವನ್ನು ಕೋಟಿ ತುಳಸಿ ಅರ್ಚನೆಯ ಮೂಲಕ ಭಗವಂತನಿಗೆ ಸಮರ್ಪಣೆ ಮಾಡಬೇಕೆಂದು ಮಹಾಸ್ವಾಮಿಗಳ ದಿವ್ಯ ಸಂಕಲ್ಪವಾಗಿದೆ.

ತತ್ಸಂಬಂಧ ಪೂರ್ವಭಾವಿಯಾಗಿ ಇದೇ ಮೇ 28ರ ಬೆಳಗ್ಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹತ್ತು ಸಾವಿರ ಮಾತೆಯರಿಂದ ಸಹಸ್ರನಾಮ ಪಾರಾಯಣವನ್ನು ಏರ್ಪಡಿಸಲಾಗಿದೆ. ಪಾರಾಯಣಕರ್ತರಿಗೆ ಅನುಕೂಲವಾಗಲು ಈಗಾಗಲೇ ಶ್ರೀಕ್ಷೇತ್ರದಿಂದ ನಾಲ್ಕು ಭಾಷೆಗಳಲ್ಲಿ ಸಹಸ್ರನಾಮದ ಕಿರುಪುಸ್ತಕ, ಕಲಾಂಬಿಕಾ ಸಹೋದರಿಯರು ಮಧ್ಯಮಾವತಿ ರಾಗದಲ್ಲಿ ಪಾರಾಯಣವನ್ನು ಹಾಡಿರುವ ಸಿ.ಡಿ. ಪ್ರಕಟವಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರ ಪಡೆ ಶ್ರಮಿಸುತ್ತಿದೆ.

ಈ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು, ಗಣ್ಯರು ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕ: 94490 32007, 98455 78992

 

 

 

Leave a Reply

Your email address will not be published. Required fields are marked *