ಬೀರೂರು: ಆಯುಧ ಪೂಜೆ ಮತ್ತು ವಿಜಯದಶಮಿಯವರೆಗೂ ಹೂವುಗಳಿಗೆ ಭರ್ಜರಿ ಬೇಡಿಕೆ ಹಾಗೂ ದರವೂ ಗಗನಕ್ಕೇರಿತ್ತು. ಆದರೆ ಇದೀಗ ಸೇವಂತಿಗೆ ಹೂ ಬೆಲೆ ಪಾತಾಳಕ್ಕಿಳಿದಿದ್ದು ರೈತರು ಕಂಗಾಲಾಗಿದ್ದಾರೆ.
ಶ್ರಾವಣ ಮಾಸ ಆರಂಭವಾದರೆ ಸಾಲು ಸಾಲು ಹಬ್ಬಗಳು ಬರುತ್ತವೆ. ಆ ಸಂದರ್ಭದಲ್ಲಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ ಹಬ್ಬದ ನಂತರ ಬೇಡಿಕೆ ಇಲ್ಲದೆ ಬೆಲೆ ದಿಢೀರ್ ಕುಸಿತವಾಗಿದೆ. ಇದರಿಂದ ರೈತರು ಮಾಡಿರುವ ಖರ್ಚು ಗಳಿಸುವುದೇ ಕಷ್ಟಕರ ಎನ್ನುವಂತಾಗಿದೆ.
ವರಮಹಾಲಕ್ಷ್ಮೀ, ಶ್ರಾವಣ, ಗೌರಿ ಗಣೇಶ ಹಬ್ಬ ಸೇರಿದಂತೆ ಆಯುಧ ಪೂಜೆವರೆಗೂ ಒಂದು ಕುಚ್ಚಿನ ಬೆಲೆ 1,300 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ ಪ್ರಸ್ತುತ ಒಂದು ಕುಚ್ಚಿನ ಬೆಲೆ 150 ರೂ. ಗೆ ಕುಸಿದಿದೆ. ಇದರಿಂದ ರೈತರು ಹೂ ಕಿತ್ತು, ಕಟ್ಟಿಸಿ, ಅದನ್ನು ಮಾರುಕಟ್ಟೆಗೆ ತಂದು ಹಾಕಲು ಆಗುವ ಖರ್ಚು ಕೂಡ ದೊರೆಯದ ಪರಿಣಾಮ ರೈತರ ಪಾಲಿಗೆ ಸೇವಂತಿಗೆ ಘಮ್ಮೆನ್ನದಂತಾಗಿದೆ.
ಬೀರೂರು ಸಮೀಪದ ಜೋಡಿತಿಮ್ಮಾಪುರ, ಕಾಳಯ್ಯನ ಕೊಪ್ಪಲು, ಬಿ.ಕೆ.ಹೂಸೂರು, ಸೀಗೆಹಡ್ಲು, ಚಿಕ್ಕಂಗಳ, ಎಮ್ಮೆದೊಡ್ಡಿ, ಹುಲ್ಲೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೊಳವೆಬಾವಿ ಹೊಂದಿರುವ ರೈತರು 10 ರಿಂದ 12 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮಾತ್ರ ಸೇವಂತಿಗೆ ಮತ್ತು ಚೆಂಡು ಹೂಗಳನ್ನು ಬೆಳೆಯುತ್ತಿದ್ದಾರೆ. ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಹಬ್ಬಗಳು ಆರಂಭವಾಗುವುದರಿಂದ ೆಬ್ರವರಿಯಲ್ಲೇ ಸೇವಂತಿಗೆ ಮತ್ತು ಚೆಂಡು ಹೂವುಗಳ ನಾಟಿ ಮಾಡಲಾಗಿತ್ತು. ಅಂದುಕೊಂಡಂತೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದಲ್ಲಿ 1,300 ರೂ.ವರೆಗೆ ಹೆಚ್ಚಿನ ಬೆಲೆಯೇ ರೈತರಿಗೆ ಸಿಕ್ಕಿತ್ತು. ಆದರೆ ಇದೀಗ ಒಂದು ಕುಚ್ಚು (10 ಮಾರು) ಹೂವಿಗೆ ಕೇವಲ 150 ರೂ.ಗೆ ಮಾರಾಟ ಮಾಡಲು ಯತ್ನಿಸಿದರೂ ಕೊಳ್ಳುವವರೇ ಬರುತ್ತಿಲ್ಲ. ಬೇರೆ ಜಿಲ್ಲೆಗಳಿಗೆ ಕಳುಹಿಸಿಕೊಡಲು ಹೆಚ್ಚಾದ ಬೆಳೆಯೂ ಇಲ್ಲ. ಬೆಳೆದ ಬೆಳೆಯನ್ನು ಕಡೂರು ಮತ್ತು ಬೀರೂರು ಮಾರುಕಟ್ಟೆಗಳಿಗೆ ಮಾತ್ರ ಮಾರಾಟ ಮಾಡುತ್ತಿದ್ದಾರೆ.
ಹಬ್ಬದ ನಂತರ ಘಮ್ಮನ್ನೆದ ಸೇವಂತಿಗೆ
ಮುಖದ ಸೌಂದರ್ಯಕ್ಕೆ ಐಸ್ಕ್ಯೂಬ್.. ಕೂಲ್.. ಕೂಲ್! ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆ.. Ice Facial Benefits
Ice Facial Benefits: ಮಹಿಳಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ…
ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits
Goat Milk Health Benefits : ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…
ಪೋಷಕರೇ ಹುಷಾರ್! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips
Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…