ಬೀದರ್: ಬಾಡಿಗೆ ಆಟೋದಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 11 ಸಾವಿರ ರೂ. ಮತ್ತು ಮೊಬೈಲ್ ಅನ್ನು ಚಾಲಕ ವೈಜಿನಾಥ ಮಂಗಳವಾರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಕೆಇಬಿ ಎದುರಿನ ಎಸ್ಬಿಎಚ್ ಕಾಲನಿಯ ಶ್ಯಾಮರಾವ ಆಣದೂರೆ ಮತ್ತು ನಲಿನಿ ದಂಪತಿ ವೈಜಿನಾಥ ಆಟೋದಲ್ಲಿ ಬಸವನಗರ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ಬಾಡಿಗೆ ಹಣ ಪಡೆದು ಚಾಲಕ ಹೊರಟು ಹೋಗಿದ್ದಾನೆ.
ನೆಂಟರ ಮನೆಗೆ ಹೋದ ನಂತರ ನಲಿನಿ ಅವರ ಪರ್ಸ್ ಮತ್ತು ಮೊಬೈಲ್ ಆಟೋದಲ್ಲಿ ಬಿಟ್ಟಿದ್ದು ಗಮನಕ್ಕೆ ಬಂದಿದೆ. ತಕ್ಷಣ ಮೊಬೈಲ್ಗೆ ಕರೆ ಮಾಡಿದಾಗ ಆಟೋ ಚಾಲಕ ವೈಜಿನಾಥ ಸ್ವೀಕರಿಸಿ ನಿಮ್ಮ ಮನೆಗೆ ತಂದು ಕೊಡುವೆ ಎಂದು ಹೇಳಿದ. ಅದರಂತೆ ಬಂದು ಪರ್ಸ್ನಲ್ಲಿದ್ದ 11 ಸಾವಿರ ರೂ. ಮತ್ತು ಮೊಬೈಲ್ ಕೊಟ್ಟಿದ್ದಾನೆ. ಖುಷಿಯಿಂದ ಶ್ಯಾಮರಾವ ಅವರು ಈತನಿಗೆ 2 ಸಾವಿರ ರೂ. ಕೊಡುತ್ತಿದ್ದರೂ ನಿರಾಕರಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಆಕಸ್ಮಿಕವಾಗಿ ಆಟೋದಲ್ಲಿ ಮರೆತುಬಿಟ್ಟು ಬಂದ ಪರ್ಸ್ನಲ್ಲಿದ್ದ 11 ಸಾವಿರ ರೂ. ಮತ್ತು ಮೊಬೈಲ್ ವಾಪಸ್ ನೀಡುವ ಮೂಲಕ ಚಾಲಕ ವೈಜಿನಾಥ ಪ್ರಾಮಾಣಿಕತೆಗೆ ಹ್ಯಾಟ್ಸಾಫ್. ವೈಜಿನಾಥ ಅವರ ಕಾರ್ಯ ಇತರ ಆಟೋ ಚಾಲಕರಿಗೆ ಮಾದರಿ.
| ಶ್ಯಾಮರಾವ ಆಣದೂರೆ, ಹಣ ಕಳೆದುಕೊಂಡವರು