ಸಿನಿಮಾ

ಹಜ್ ಯಾತ್ರಿಗಳಿಗೆ ಆರೋಗ್ಯ ತಪಾಸಣೆ,ಲಸಿಕೆ ಕಡ್ಡಾಯ

ಚಿತ್ರದುರ್ಗ: ಆರೋಗ್ಯಇಲಾಖೆ,ಹಜ್‌ಯಾತ್ರಾರ್ಥಿಗಳ ಸೇವಾ ಕಮಿಟಿ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಹಜ್‌ಯಾ ತ್ರಿಗಳ ಆರೋಗ್ಯ ತಪಾಸಣೆ,ಲಸಿಕೆ ಹಾಗೂ ತರಬೇತಿ ಕಾರ‌್ಯಕ್ರಮಕ್ಕೆ ಡಿಎಚ್‌ಒ ಡಾ.ಆರ್.ರಂಗನಾಥ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು,ವಿದೇಶಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುವುದನ್ನು ತಪ್ಪಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾತ್ರಿಗಳಿಗೆ ಆರೋಗ್ಯ ತಪಾಸಣೆ,ಲಸಿಕೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಯಾತ್ರಿ ಗಳಿಗೆ ಬಹಳ ಮುಖ್ಯವಾಗಿ ಮೆದುಳು ಜ್ವರ,ಲಸಿಕೆ,ಶೀತ,ಕೆಮ್ಮು,ಜ್ವರ,ಕೋವಿಡ್ ಹಾಗೂ ಪೊಲಿಯೊ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 96 ಜನರು ಹಜ್‌ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ,ಎಲ್ಲರೂ ಕಡ್ಡಾಯ ಆರೋಗ್ಯ ತಪಾಸಣೆಯೊಂದಿಗೆ ಅಗತ್ಯ ಲಸಿಕೆಗಳನ್ನು ಹಾಕಿಸಿ ಕೊಳ್ಳಬೇಕೆಂದರು.

ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಜಿಲ್ಲಾಸ್ಪತ್ರೆ ಆರ್‌ಎಂಒ ಡಾ.ಆನಂದ ಪ್ರಕಾಶ್ ರಾಜ್ಯವಕ್ಫ್ ಸಲಹಾ ಸ ಮಿತಿ ಅಧ್ಯಕ್ಷ ಅನ್ವರ್‌ಬಾಷಾ,ನೋಡಲ್ ಅಧಿಕಾರಿ ಶಂಶುನ್ನಿಸಾ,ಜಿಲ್ಲಾಧ್ಯಕ್ಷ ಇಕ್ಬಾಲ್‌ಹುಸೇನ್,ಜಿಲ್ಲಾ ವಕ್ಫ್ ಅಧಿಕಾರಿ ಅಮ್ಜದ್ ಮುಯೀ ನ್,ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹಾಜಿ ಆರ್.ದಾದಾಪೀರ್,ಆರೋಗ್ಯ ತಪಾಸಣೆ ಮತ್ತು ಲಸಿಕಾ ತಂಡದ ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ಶ್ರೀಧರ್,ಗಂಗಾಧರ್,ರಂಗಾರೆಡ್ಡಿ ಇತರರು ಇದ್ದರು.


Latest Posts

ಲೈಫ್‌ಸ್ಟೈಲ್