ಸ್ವಾಭಿಮಾನದ ಸಂಕೇತ ಶಿವಾಜಿ ಮಹಾರಾಜ

blank

ಬಾಗಲಕೋಟೆ: ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಬಾರ ವಹಿಸಿಕೊಂಡು ವೀರ, ಶೂರ, ತ್ಯಾಗಿಯಾಗಿ ವೈರಿಯ ಎದುರು ಶರಣಾಗದ ಸ್ವಾಭಿಮಾನಿಯಾದವರು ಛತ್ರಪತಿ ಶಿವಾಜಿ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಾಲ್ಯದಲ್ಲಿಯೇ ತಾಯಿ ಜೀಜಾಬಾತಿ ಮಹಾಭಾರತ ರಾಯಾಯಣಗಳಂತ ನೈತಿಕ ಶೌರ್ಯದ ಕಥೆಗಳನ್ನು ಹೇಳಿಕೊಟ್ಟಿದ್ದರ ಪ್ರಕಾರ, ದಾದಾ ಕೊಂಡದೇವ ಗುರುವಿನಿಂದ ಕುದುರೆ ಸವಾರಿ ಸೇರಿದಂತೆ ರಣನೀತಿ ಕಲಿತ. ಆದ್ಯಾತ್ಮಿಕವಾಗಿ ಸಂತ ರಾಮದಾಸರನ್ನು ಗುರು ಮಾಡಿಕೊಂಡಿದ್ದರು ಎಂದರು.

ಆಳ್ವಿಕೆಯ ಪ್ರಥಮದಲ್ಲಿಯೇ ಸ್ಥಳೀಯ ಮಾವಳಿ ಸೈನ್ಯ ಕಟ್ಟಿಕೊಂಡು ತನೆಗೆ ಎದುರಾದ ಆದಲಿಶಾಯಿ ಕುತುಬಶಾಯಿ, ಡಚ್ಚರು ಮತ್ತು ಪೋರ್ತಗೀಜರನ್ನು ಏಕಕಾಲಕ್ಕೆ ಎದುರಿಸಿ ವಿಜಯ ಸಾಧಿಸಿದವರು ಶಿವಾಜಿ. ಆದಿಲಶಾಯಿಗೆ ಶರಣಾಗುವ ಪ್ರಸಂಗ ಬಂದಾಗ ತನ್ನ ಸ್ವಾಭಿಮಾನದಿಂದ ಶರಣಾಗದೇ ಆದಿಲಶಾಯಿಯನ್ನು ಮಣಿಸಿದ. ಪಾಲಕರಾದವರು, ತಾಯಂದಿರು ತಮ್ಮ ಮಕ್ಕಳಿಗೆ ಜೀಜಾಬಾಯಿಯಂತೆ ವೀರ ಶೂರರ ಕಥೆಗಳನ್ನು ಹೇಳಿ ಶಿಕ್ಷಣವಂತರನ್ನಾಗಿ ಮಾಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಮಾತನಾಡಿ ಶಿವಾಜಿ ಚಿಕ್ಕವನಾಗಿದ್ದಾಗ ಸ್ವಪ್ನದಲ್ಲಿ ಹೆದರಿ ಕೊಂಡಿದ್ದರ ಬಗ್ಗೆ ತಾಯಿಯ ಎದುರು ಹೇಳಿಕೊಂಡ. ತಾನಿನ್ನದ ಸಮಯದಲ್ಲಿ ಸೇವಕಿಯೊಬ್ಬಳ ಒಂದು ದಿನ ಹಾಲು ಕುಡಿಸಿದ ಪರಿಮಾಣ ನೀನು ಹೆದರಿದ್ದಿ. ಆದರೆ ನನ್ನ ಹಾಲು ಕುಡಿದ ನೀನು ಎಂದು ಭಯ ಪಡಬೇಡ ಎಂದು ಹೇಳಿದನ್ನು ಕೇಳಿದ್ದೇವೆ. ವೀರ ಶೂರನಾದವರಿಗೆ ಇಂತಹ ತಾಯಿ ಮಾದರಿಯಾಗಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷೆ ಸವಿತಾ ಲೇಂಕನ್ನವರ ಮಾತನಾಡಿ ಜೀಜಾಬಾಯಿ ಗರ್ಭವತಿಯಾದ ಸಂದರ್ಭದಲ್ಲಿ ಅನೇಕ ವೀರ ಶೂರರ ಚರಿತ್ರೆ ಕೇಳುತ್ತಾ ಆದ್ಯಾತ್ಮಿಕ ಚಿಂತನೆ ಮಾಡಿದ್ದರ ಫಲವಾಗಿ ಶಿವಾಜಿ ಹುಟ್ಟಿನಿಂದಲೇ ಶೂರ, ಧೀರ ಹಾಗು ಮಾನವೀಯತೆ ಮೌಲ್ಯವುಳ್ಳವನಾಗಿದ್ದನು ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಶಿರೂರ ಸಿದ್ದೇಶ್ವರ ಪ್ರೌಢಶಾಲೆಯ ಸಹ ಶಿಕ್ಷಕ ಸಂಜಯ ನಡುವಿನಮನಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹಾಗೂ ರಣರೋಚಕ ಪ್ರಸಂಗಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಗ್ರೇಡ್-2 ತಹಶೀಲ್ದಾರ ಬಿರಾದಾರ ಸೇರಿದಂತೆ ಸಮುದಾಯ ಮುಖಂಡರಾದ ಡಾ.ಶೇಖರ ಮಾನೆ, ಶ್ರೀಕಾಂತ ಪಾಟೀಲ, ಆರ್.ಆರ್.ಸೂರ್ಯವಂಶಿ, ವಾಸುದೇವ ಜಾಧವ, ಕಲ್ಪನಾ ಸಾವಂತ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

Share This Article

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಹೀಗೆ ಮಾಡಿ ನೋಡಿ..Gastric Problem

Gastric Problem: ಪ್ರಸ್ತುತ ಯುಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ…

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…