More

  ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಿ ಸಂವಿಧಾನ

  ಕಾರವಾರ: ಡಾ. ಬಿ.ಆರ್. ಅಂಬೇಡ್ಕರವರ ನೇತೃತ್ವದಲ್ಲಿ ರಚಿಸಿದ ಸಂವಿಧಾನದಿಂದಾಗಿಯೇ ಸಾಮಾನ್ಯ ವ್ಯಕ್ತಿ ಗೌರವದಿಂದ ಬದುಕಲು ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

  ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

  ನನ್ನಂಥ ಗೃಹಿಣಿ ಸಹ ರಾಜಕೀಯ ಪ್ರವೇಶಿಸಿ ಉನ್ನತ ಸ್ಥಾನಮಾನ ಅಲಂಕರಿಸಲು ಸಂವಿಧಾನವೇ ಕಾರಣ. ಸಂವಿಧಾನ ದೇಶದ ಎಲ್ಲ ವರ್ಗದವರಿಗೆ ನ್ಯಾಯ, ಆಹಾರ ಭದ್ರತೆ, ಶಿಕ್ಷಣ, ಸ್ವಾಭಿಮಾನದಿಂದ ಬದುಕಲು ಅವಶ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಿದೆ ಎಂದರು.

  ಆಕರ್ಷಕ ಪರೇಡ್: ಧ್ವಜಾರೋಹಣ ಬಳಿಕ ಸಚಿವರು ತೆರೆದ ಜೀಪ್​ನಲ್ಲಿ ತೆರಳಿ 16 ತುಕಡಿಗಳನ್ನು ಪರಿಶೀಲಿಸಿದರು. ನಂತರ ಪರೇಡ್ ಕಮಾಂಡರ್ ಸಚಿನ್ ಲಾರೆನ್ಸ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಸೇಂಟ್ ಜೊಸೆಫ್ ಪ್ರೌಢಶಾಲೆಯ ಎನ್​ಸಿಸಿ ಬೆಟಾಲಿಯನ್ ಮೊದಲ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತಂಡ ಎರಡನೆಯ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್​ನ ತಂಡ ಮೂರನೆಯ ಬಹುಮಾನ ಪಡೆಯಿತು. ವಿವಿಧ ಶಾಲೆ, ಕಾಲೇಜ್​ಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ದೇಶಭಕ್ತಿಯ ನೃತ್ಯ ರೂಪಕಗಳು ಗಮನ ಸೆಳೆದವು.

  ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕಿ ರೂಪಾಲಿ ನಾಯ್ಕ, ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಎಸ್​ಪಿ ಶಿವ ಪ್ರಕಾಶ ದೇವರಾಜು, ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ.ಇದ್ದರು.

  See also  ಲಾಂಗ್, ಮಚ್ಚು ಹಿಡಿದ ರೌಡಿಗಳಿಗೆ ಗುರು ಪದ ಬಳಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts