More

  ಸ್ವಾತಂತ್ರೃ ಸಂಗ್ರಾಮದ ಬೆಳ್ಳಿಚುಕ್ಕಿ ರಾಣಿ ಚನ್ನಮ್ಮ

  ಹುಕ್ಕೇರಿ: ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮ ಜೀವನಾಧಾರಿತ ನಾಟಕಕ್ಕೆ ಜನಸಾಗರದ ಬೆಂಬಲ ಸಿಕ್ಕಿರುವುದು ಸಂತಸ ತಂದಿದೆ. ತಾಲೂಕಿನ ಮಟ್ಟಿಗೆ ಹಿಂದೆಂದೂ ನಡೆದಿರದ ಬೃಹತ್ ನಾಟಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
  ಪಟ್ಟಣದಲ್ಲಿ ಎರಡು ದಿನ ಹಮ್ಮಿ ಕೊಂಡಿದ್ದ ನಾಟಕ ಪ್ರದರ್ಶನದ ಗುರುವಾರ ಏರ್ಪಡಿಸಿದ್ದ ಸಮಾರೋಪ ದಲ್ಲಿ ಮಾತನಾಡಿದ ಅವರು, ಕಿತ್ತೂರು ಸಂಸ್ಥಾನದ ಗತವೈಭವ ಸಾರುವ ನಾಟಕ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಜರುಗಿತು. 50 ಸಾವಿರಕ್ಕೂ ಹೆಚ್ಚು ಜನ ನಾಟಕ ವೀಕ್ಷಿಸಿದರು ಎಂದು ತಿಳಿಸಿದರು.

  ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ಈ ನಾಟಕ ರಚಿಸಿ ಪ್ರದರ್ಶಿಸಲು ದಿ.ಉಮೇಶ ಕತ್ತಿ ಅವರು ಬೆಂಬಲಿಸಿದ್ದರು. ಅವರ ಆಶಯದ ಯಶಸ್ವಿಯಾಗಿರುವುದಕ್ಕೆ ಕ್ಷೇತ್ರದ ಸಹಸ್ರಾರು ಜನರೇ ಸಾಕ್ಷಿ ಎಂದರು.

  ನಾಟಕ ಪ್ರದರ್ಶನ ಹಾಗೂ ಆಗಮಿಸಿದ್ದ ಜನರ ಊಟೋಪಚಾರ ವ್ಯವಸ್ಥೆ ಮಾಡಿದ್ದ ಹಿರಾ ಶುಗರ್ಸ್‌ ಅಧ್ಯಕ್ಷ ನಿಖಿಲ್ ಕತ್ತಿ ಹಾಗೂ ವಿಶ್ವರಾಜ ಶುಗರ್ಸ್‌ ಲಿಮಿಟೆಡ್ ನಿರ್ದೇಶಕ ಪೃಥ್ವಿ ಕತ್ತಿ, ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಅವರನ್ನು ಸತ್ಕರಿಸಲಾಯಿತು. ವೀರರಾಣಿ ಕಿತ್ತೂರು ಚನ್ನಮ್ಮ ಈ ಮೆಗಾ ನಾಟಕದಲ್ಲಿ ಆನೆ, ಕುದುರೆ, ಒಂಟೆ ಸಹಿತ ಬೆಳಗಾವಿ, ಸವದತ್ತಿ, ಧಾರವಾಡ ಸೇರಿ ವಿವಿಧ ಜಿಲ್ಲೆಗಳ 300 ಕಲಾವಿದರು ಪಾತ್ರ ನಿರ್ವಹಿಸಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಬೆಲ್ಲದ ಬಾಗೇವಾಡಿ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಸಂಕೇಶ್ವರ ಶಂಕರಾಚಾರ್ಯ ಮಠದ ಶ್ರೀ, ಹತ್ತರಗಿ ಕಾರಿಮಠ, ಕ್ಯಾರಗುಡ್ಡ ಆವಜೀಕರ ಆಶ್ರಮದ ಶ್ರೀಗಳು, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಸತ್ತೆಪ್ಪ ನಾಯಿಕ, ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts