ಸ್ವಯಂ ಪ್ರೇರಣೆಯಿಂದ ಕೆರೆ ಒಳಗಟ್ಟಿ ನಿರ್ಮಾಣ

ನರೇಗಲ್ಲ: ರೈತರು ಸ್ವಯಂ ಪ್ರೇರಣೆಯಿಂದ ಸ್ವಂತ ಹಣದಲ್ಲಿ ಐತಿಹಾಸಿಕ ಹಿರೇಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ಪ್ರೇರಣೆಗೊಂಡಿರುವ ಸ್ಥಳೀಯ ಚಂದ್ರಮೌಳೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ವಿುಕರ ಸಂಘದ ಸದಸ್ಯರು ಪ್ರತಿ ಮಂಗಳವಾರ ಹಿರೇಕೆರೆಯಲ್ಲಿನ ಒಳಗಟ್ಟಿ ನಿರ್ವಣಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ.

ಪ್ರತಿ ಮಂಗಳವಾರ ಕಟ್ಟಡ ಕಾರ್ವಿುಕರಿಗೆ ರಜಾ ದಿನ. ಅಂದು ಹಿರೇಕೆರೆಯ ಕಾರ್ಯಕ್ಕೆ ಮೀಸಲಿಡಲು ಸದಸ್ಯರು ನಿರ್ಧರಿಸಿದ್ದಾರೆ. ಹಿರೇಕೆರೆಯಲ್ಲಿನ ಒಳಗಟ್ಟಿ ಕಾರ್ಯ ಮುಗಿಯುವವರೆಗೂ ಪ್ರತಿ ಮಂಗಳವಾರ ಕಟ್ಟಡ ಕಾರ್ವಿುಕರು ಒಳಗಟ್ಟಿ ನಿರ್ವಣದಲ್ಲಿ ತೊಡಗಲಿದ್ದಾರೆ. ಕಟ್ಟಡ ಕಾರ್ವಿುಕರು ಒಳಗಟ್ಟಿ ನಿರ್ವಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಳಗಟ್ಟಿ ನಿರ್ವಣದಿಂದ ಕೆರೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನೀರು ಹರಿದು ಹೋದಾಗ ದಂಡೆಯ ಮಣ್ಣು ಕೊಚ್ಚಿ ಹೋಗುವುದಿಲ್ಲ. 50*5 ಅಳತೆಯ ಎರಡು ಒಳಗಟ್ಟಿ ನಿರ್ವಣವಾಗಲಿವೆ. ಕೆರೆಯಲ್ಲಿ ಹೆಚ್ಚುವರಿ ಪ್ರಮಾಣದ ನೀರು ಸರಾಗವಾಗಿ ಹರಿದು ಹೋಗಲು ಒಳಗಟ್ಟಿಗಳು ಸಹಾಯಕವಾಗಲಿವೆ.

ಬಸವರಾಜ ವಂಕಲಕುಂಟಿ, ಜಗದೀಶ ಸಂಕನಗೌಡ್ರ, ಗುಡದಪ್ಪ ಗೋಡಿ, ಶ್ಯಾಮ ಹಮನಸಾಗರ, ಭೀಮಷಿ ಹನಮಸಾಗರ ಸೇರಿ 50ಕ್ಕೂ ಅಧಿಕ ಕಾರ್ವಿುಕರು ಇದ್ದರು.

ರೈತರು ಹಾಗೂ ನರೇಗಲ್ಲ ನೆಲ, ಜಲ ಸಂರಕ್ಷಣೆ ಸಮಿತಿ ನರೇಗಲ್ಲನ ಹಿರೇಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ. ಆದರೆ, ಕೆರೆಗೆ ಒಳಗಟ್ಟಿ ಇಲ್ಲದಿರುವುದು ನಮ್ಮ ಗಮಕ್ಕೆ ಬಂದಿದೆ. ಹೀಗಾಗಿ ನಮ್ಮ ಸಂಘದ ಸದಸ್ಯರು ಶ್ರಮದಾನದ ಮೂಲಕ ಒಳಗಟ್ಟಿ ನಿರ್ವಿುಸಲು ನಿರ್ಧರಿಸಿದ್ದೇವೆ.

| ಸಂತೋಷ ಮಣ್ಣೊಡ್ಡರ, ಅಧ್ಯಕ್ಷ ಚಂದ್ರಮೌಳೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ವಿುಕರ ಸಂಘ

ಕಟ್ಟಡ ಕಾರ್ವಿುಕರ ಸಂಘದ ಸದಸ್ಯರು ಕೆರೆ ಅಭಿವೃದ್ಧಿಗಾಗಿ ನಾವು ಕೈ ಜೋಡಿಸುತ್ತೇವೆ ಎಂದು ತಿಳಿಸಿದ್ದಾರೆ. ಒಳಗಟ್ಟಿ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆರೆ ಹೂಳೆತ್ತುವ ಕಾರ್ಯವಾದ ನಂತರ ಒಳಗಟ್ಟಿಯ ಕೊರತೆ ಕಾಡುತ್ತಿತ್ತು. ಅದನ್ನು ಕಾರ್ವಿುಕರ ಸಂಘದ ಸದಸ್ಯರು ಪೂರ್ಣಗೊಳಿಸಿದ್ದಾರೆ. ಜಿಲ್ಲಾಡಳಿತ ಕೆರೆಗೆ ನೀರು ತುಂಬಿಸುವ ಬಗ್ಗೆ ಚಿಂತಿಸಬೇಕಿದೆ.

| ಗುರುರಾಜ ಕುಲಕರ್ಣಿ ಅಧ್ಯಕ್ಷ, ನೆಲ, ಜಲ ಸಂರಕ್ಷಣಾ ಸಮಿತಿ

Leave a Reply

Your email address will not be published. Required fields are marked *