Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸ್ವಚ್ಛ ಬೀದರ್ಗೆ ಜನತೆ ಸಾಥ್ ನೀಡಿ

Thursday, 12.07.2018, 10:36 PM       No Comments

ಬೀದರ್: ಪ್ರತಿಯೊಬ್ಬರೂ ತಮಗಿರುವ ಧರ್ಮದ ಅಭಿಮಾನದಂತೆ ಸ್ವಚ್ಛತೆ ಕಡೆಗೂ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಸಾರ್ವಜನಿಕರು ಸಹಭಾಗಿತ್ವ ನೀಡಿದಾಗಲೇ ಸ್ವಚ್ಛ ಬೀದರ್ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ನಗರಸಭೆ ಆಯುಕ್ತ ಮನೋಹರ ಹೇಳಿದರು.

ವಿದ್ಯಾನಗರದ ಡಾ.ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಅನುಭವ ಮಂಟಪ ತಿಂಗಳ ಕಾರ್ಯಕ್ರಮ, ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ತಮ್ಮ ಓಣಿ ಹಾಗೂ ಸುತ್ತಲಿನ ಪರಿಸರ ಉತ್ತಮವಾಗಿ ಇಟ್ಟುಕೊಳ್ಳಬೇಕು. ಇದು ಪ್ರತಿಯೊಬ್ಬ ನಾಗರಿಕರ ಜಿಮ್ಮೇದಾರಿ ಆಗಬೇಕು. ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ ಜನಾರೋಗ್ಯಕ್ಕೆ ಕುತ್ತು ತಂದಿದೆ. ಜಿಲ್ಲೆಯನ್ನು ಪ್ಲಾಸ್ಟಿಕ್ಮುಕ್ತ ಮಾಡುವ ಪ್ರಯತ್ನ ನಡೆದಿದೆ. ಎಲ್ಲರೂ ಸ್ವ ಇಚ್ಛೆಯಿಂದ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು ಎಂದು ಕೋರಿದರು.

ವಿಜಯಪುರದ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಕಾರ್ಯದಶರ್ಿ ಡಾ.ಎಂ.ಎಸ್. ಮದಭಾವಿ ಅನುಭಾವ ಮಂಡಿಸಿ, ಹಳಕಟ್ಟಿ ಜೀವನವು 12ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಂಗ್ರಹದ ಪತ್ರ ಸೇವಾ ಮನೋಭಾವವಾಗಿತ್ತು, ಬದುಕಿನುದ್ದಕ್ಕೂ ಕಷ್ಟದ ಮಡುವಿನಲ್ಲಿದ್ದು, ಬಡತನದ ಬೇಗೆಯಲ್ಲಿ ನೊಂದು ಬೆಂದು ಮನೆ, ಹೆಂಡತಿ ಮಕ್ಕಳೆನ್ನದೆ ವಚನಗಳನ್ನು ಸಂಗ್ರಹಿಸಿ ಮುದ್ರಣ ಮಾಡಿರುವುದು ಶ್ರೇಷ್ಠ ಕಾರ್ಯ. ವಚನಗಳನ್ನು ತಾಡೊಲೆಗಳಿಂದ ಪುಸ್ತಕ ರೂಪದಲ್ಲಿ ತಂದ, ಬಿಎಲ್ಡಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದೇಶ್ವರ ಬ್ಯಾಂಕ್ ಆರಂಭಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ಕೇಂದ್ರ ಸಕರ್ಾರದಿಂದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಸಾಧಕರ ಪ್ರಶಸ್ತಿ ಪುರಸ್ಕೃತ ಸ್ತ್ರೀ ರೋಗ ತಜ್ಞೆ ಡಾ.ಸುಮನ ಭಾಲ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿಗಳು ಹುಡುಕಿಕೊಂಡು ಬಂದಾಗ ಸಮಾಧಾನವಾಗುತ್ತದೆ. ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ಸಹ ನೀಡುತ್ತದೆ. ಬಡ ರೋಗಿಗಳ ಸೇವೆ ಮಾಡುವುದು ದೇವರ ಪೂಜೆಗೆ ಸಮಾನ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಪ್ರೊ.ಎಸ್.ಬಿ. ಬಿರಾದಾರ ಅಧ್ಯಕ್ಷತೆ, ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಉದ್ಯಮಿ ಬಸವರಾಜ ಧನ್ನೂರ, ಪ್ರಸಾದನಿಲಯ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಇದ್ದರು. ಶಿವಕುಮಾರ ಭಾಲ್ಕೆ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಣೆ ಮಾಡಿದರು. ಯೋಗೇಂದ್ರ ಯದಲಾಪುರೆ ವಂದಿಸಿದರು.

ಡಾ.ಸುಮನ ಭಾಲ್ಕೆ, ನಗರಸಭೆ ಸದಸ್ಯೆ ಶಕುಂತಲಾ ಮಲ್ಕಪನೋರ, ಬಿ.ಎಂ. ಶಶಿಕಲಾ, ಸ್ಫೂತರ್ಿ ಬಸವರಾಜ ಧನ್ನೂರ, ಸದಾಶಿವ ದೊಡ್ಡಮನಿ, ಮಹಾದೇವಿ ಡಾ.ವೈಜಿನಾಥ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

 

Leave a Reply

Your email address will not be published. Required fields are marked *

Back To Top