ಮುದ್ದೇಬಿಹಾಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ, ಪುರಸಭೆ ಕಚೇರಿ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಶುಕ್ರವಾರ ಡೆಂಗ್ಯೂ ಜಾಗತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯ ಮಹಿಬೂಬ ಗೊಳಸಂಗಿ ಮಾತನಾಡಿ ಸ್ವಚ್ಛತೆಯ ಮಹತ್ವ ಮನವರಿಕೆ ಮಾಡಿಕೊಟ್ಟು ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವ ಸಮೀೆಗೆ ಮನೆಗೆ ಬಂದಾಗ ಜನತೆ ಸಹಕರಿಸಿ ರೋಗ ನಿಯಂತ್ರಣಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಸ್ಥಾಯಿ ಸಮಿತಿ ಅಧ್ಯ ಯಲ್ಲಪ್ಪ ನಾಯ್ಕಮಕ್ಕಳ, ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ, ಆರೋಗ್ಯ ನಿರೀಕ ಮಹಾಂತೇಶ ಕಟ್ಟಿಮನಿ, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಇದ್ದರು.
ತಾಲೂಕು ಸರ್ಕಾರಿ ಆಸ್ಪತ್ರೆಯ ಎನ್ಸಿಡಿ ವಿಭಾಗದ ವೈದ್ಯ ಡಾ.ಎಚ್.ಎ.ಚವ್ಹಾಣ, ಆಪ್ತ ಸಮಾಲೋಚಕ ಎಂ.ಎಸ್.ಅಂಬಿಗೇರ ಅವರು ಪೌರಕಾರ್ಮಿಕರಿಗೆ ಮಧುಮೇಹ, ರಕ್ತದೊತ್ತಡ ಸೇರಿ ಆರೋಗ್ಯ ತಪಾಸಣೆ ನಡೆಸಿದರು. ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಮಾತನಾಡಿ, ಮಳೆಗಾಲ ಪ್ರಾರಂಭವಾಗಿದೆ. ಸೊಳ್ಳೆಯಿಂದ ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ತಡೆಯಲು ಆಯಾ ಗ್ರಾಪಂಗಳ ಪಿಡಿಒಗಳ ನೆರವಿನೊಂದಿಗೆ ಆರೋಗ್ಯ ಇಲಾಖೆಯವರು ಅಗತ್ಯ ಕ್ರಮ ಕೈಕೊಳ್ಳಬೇಕು. ಗ್ರಾಪಂನವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಕುಡಿಯುವ ನೀರಿನ ಮೂಲಗಳನ್ನು, ಟ್ಯಾಂಕ್ಗಳನ್ನು ಕ್ಲೋರಿನೇಷನ್ (ಬ್ಲೀಚಿಂಗ್ ಪೌಡರ್) ಮಾಡಬೇಕು. ಸೊಳ್ಳೆಗೆ ತಾಣಗಳಾದ ನೀರು ನಿಲ್ಲುವ ಸ್ಥಳಗಳನ್ನು ಮುಚ್ಚಿಸಬೇಕು ಎಂದು ಹಲವು ಸಲಹೆ ನೀಡಿದರು. ೆತ್ರ ಆರೋಗ್ಯ ಶಿಣಾಧಿಕಾರಿ ಅನುಸೂಯ ತೇರದಾಳ ಮಾತನಾಡಿ ರೋಗ ಲಣ, ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ನೀಡಿದರು.
ಯೋಜನಾಧಿಕಾರಿ ಖುಬಾಸಿಂಗ್ ಜಾಧವ, ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ, ಅರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪಿಡಿಒಗಳು, ಮೇಲ್ವಿಚಾರಕ ಯಲ್ಲಪ್ಪ ಚಲವಾದಿ, ವಿಬಿಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ ಇದ್ದರು. ಆರೋಗ್ಯ ನಿರೀಣಾಧಿಕಾರಿ ಎಂ.ಎಸ್.ಗೌಡರ ನಿರ್ವಹಿಸಿದರು.
