ಸ್ವಚ್ಛತೆ ಅರಿವು ಮೂಡಿಸಲು ಕಲಾಜಾಥಾ

ಕೋಲಾರ: ಗ್ರಾಮೀಣ ಸಮುದಾಯದಲ್ಲಿ ಶೌಚಗೃಹ ಬಳಕೆ, ನೈರ್ಮಲ್ಯ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಆಯ್ದ 50 ಗ್ರಾಪಂಗಳಲ್ಲಿ ಕಲಾ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ವಚ್ಛ ಮೇವ ಜಯತೇ ಕಲಾ ಜಾಥಾ ರಥಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ವಯ ಗ್ರಾಮೀಣ ಕರ್ನಾಟಕವನ್ನು ’ಬಯಲು ಬಹಿರ್ದೆಸೆಮುಕ್ತ’ ಎಂದು ಘೋಷಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಮೊದಲ ಹಂತದಲ್ಲಿ ರಾಜ್ಯಾದ್ಯಂತ 2000 ಗ್ರಾಪಂಗಲ್ಲಿ ಜಾಗೃತಿ ಮೂಡಿಸಿ ’ತ್ಯಾಜ್ಯ ಮುಕ್ತ ಗ್ರಾಮ’ಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯಾಗಿ ಕೋಲಾರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶೌಚಗೃಹ ಬಳಕೆ, ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, ಜಿಲ್ಲೆಯಲ್ಲಿ 156 ಗ್ರಾಪಂಗಳ ಪೈಕಿ 50 ಗ್ರಾಮ ಪಂಚಾಯಿತಿಗಳನ್ನು ಕಲಾ ಜಾಥಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕಲಾ ಜಾಥಾ ರಥದೊಂದಿಗೆ ತರಬೇತಿ ಹೊಂದಿದ ಕಲಾ ತಂಡವು ಇದ್ದು, ಇದು ನಾಟಕಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ. ಈ ಕಾರ್ಯಕ್ರಮವು ಇಂದಿನಿಂದ ಅ.15ರವರೆಗೆ ನಡೆಯಲಿದೆ ಎಂದರು. ಸ್ವಚ್ಛ ಭಾರತ್ ಅಭಿಯಾನದ ಜಿಲ್ಲಾ ಸಂಯೋಜಕ ಜಗದೀಶ್ ಮಾತನಾಡಿ, ಬಂಗಾರಪೇಟೆಯ ಕಾರಹಳ್ಳಿ, ಬೇತಮಂಗಲ, ಕ್ಯಾಸಂಬಳ್ಳಿ, ಕಾಮಸಮುದ್ರ, ಬೂದಿಕೋಟೆ, ಘಟ್ಟಮಾದಮಂಗಲ, ಚಿಕ್ಕಂಕಂಡಹಳ್ಳಿ, ಸೂಲಿಕುಂಟೆ, ಕೇತಗಾನಹಳ್ಳಿ, ಹುಲಿಬೆಲೆ. ಕೋಲಾರ ತಾಲೂಕಿನ ಹುತ್ತೂರು, ಹೋಳೂರು, ಅರಹಳ್ಳಿ, ಸುಗಟೂರು, ವಕ್ಕಲೇರಿ, ವೇಮಗಲ್, ಅರಾಭಿಕೊತ್ತನೂರು, ಕುರುಗಲ್, ನರಸಾಪುರ, ಹರಟಿ, ಮಾಲೂರಿನ ಅರಳೇರಿ, ಚಿಕ್ಕತಿರುಪತಿ, ಕುಡಿಯನೂರು, ಹುಂಗೇನಹಳ್ಳಿ, ಮಡಿವಾಳ, ಮಾಸ್ತಿ, ಟೇಕಲ್, ಶಿವಾರಪಟ್ಟಣ, ತೊರ‌್ನಹಳ್ಳಿ, ಲಕ್ಕೂರು, ಮುಳಬಾಗಿಲಿನ ಬೈರಕೂರು, ತಾಯಲೂರು, ಆವಣಿ, ಕುರುಡುಮಲೆ, ದೇವರಾಯಸಮುದ್ರ, ಅಂಬ್ಲಿಕಲ್ಲು,ಸೊನ್ನವಾಡಿ, ಉರುಕುಂಟೆ ಮಿಟ್ಟೂರು, ಮಲ್ಲನಾಯಕನಹಳ್ಳಿ, ಮೋತಕಪಲ್ಲಿ ಹಾಗೂ ಶ್ರೀನಿವಾಸಪುರದ ರಾಯಲ್ಪಾಡು, ಲಕ್ಷ್ಮೀಪುರ, ತಾಡಿಗೋಳ್, ರೋಣೂರು, ಸೋಮಯಾಜಲಹಳ್ಳಿ, ಪುಲಗೂರಕೋಟೆ, ಯಲ್ದೂರು, ಜೆ. ತಿಮ್ಮಸಂದ್ರ, ಲಕ್ಷ್ಮೀಸಾಗರ ಹಾಗೂ ಗೌನಿಪಲ್ಲಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಜಾಥಾ ನಡೆಯಲಿದೆ ಎಂದರು.

ಜಿಪಂ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಸಹಾಯಕ ಯೋಜನಾಧಿಕಾರಿ ವಸಂತ್, ಸಹಾಯಕ ಕಾರ್ಯದರ್ಶಿ ರವಿಚಂದ್ರ, ಗೋವಿಂದಗೌಡ ಹಾಗೂ ಜಿಪಂ ಸಿಬ್ಬಂದಿ ಉಪಸ್ಥಿತರಿದ್ದರು.

 

ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಗ್ರಾಮಪಂಚಾಯಿತಿಯಿಂದ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಈ ಕಸವನ್ನು ಬಳಸಿ ಗೊಬ್ಬರ ತಯಾರಿಸಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಆಯ್ದ 50 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
ಸಂಜೀವಪ್ಪ, ಜಿಪಂ ಉಪ ಕಾರ್ಯದರ್ಶಿ .

Leave a Reply

Your email address will not be published. Required fields are marked *