ಸ್ಮಾರ್ಟ್‌ಕ್ಲಾಸ್‌ನಿಂದ ಗುಣಮಟ್ಟದ ಶಿಕ್ಷಣ

ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಸ್ಮಾರ್ಟ್‌ಕ್ಲಾಸ್‌ಗಳು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಹಕಾರಿಯಾಗಿವೆ ಎಂದು ದಾವಣಗೆರೆ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಎಚ್.ಕೆ.ಲಿಂಗರಾಜು ಹೇಳಿದರು.

ಶಿಕ್ಷಣ ಇಲಾಖೆ ತಾಲೂಕಿನ ನೀಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಸಂಪನ್ಮೂಲ ಶಿಕ್ಷಕರ ಸಭೆಯಲ್ಲಿ ನಲಿ-ಕಲಿ ಕುರಿತು ಮಾತನಾಡಿದರು.

ಕೆಲ ಪಾಲಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವವಿದೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸವಲತ್ತು ಒದಗಿಸಿ ಉಚಿತ ಶಿಕ್ಷಣ ಕೊಡುತ್ತಿರುವ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವ ವಿಷಯದಲ್ಲೂ ಕಡಿಮೆಯಿಲ್ಲ ಎಂದರು.

ಸಿಆರ್‌ಪಿ ಎಚ್.ಸಲೀಂ, ಆಡಳಿತ ವಿಭಾಗದ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಪ್ರಭಾರಿ ಬಿಇಒ ಮಹೇಶ್ ಪೂಜಾರ, ಬಿಆರ್‌ಸಿ ಡಿ.ಎಸ್.ಲಿಂಗೇಶ್, ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ, ಶಿಕ್ಷಕ ಸಂಘದ ಅಧ್ಯಕ್ಷ ಅಂಜನಪ್ಪ, ಪತ್ತಿನ ಬ್ಯಾಂಕ್ ಅಧ್ಯಕ್ಷ ಎಸ್.ಸಿದ್ದಪ್ಪ, ಸಂಘದ ಪದಾಧಿಕಾರಿ ಪದ್ಮರಾಜ್, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿ, ಜಿಲ್ಲಾ ಯೋಜನಾಧಿಕಾರಿ, ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.