ಸ್ಮಶಾನ ಎತ್ತಂಗಡಿಗೆ ಹುನ್ನಾರ!

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ನಾನಾ ಕಾರಣಗಳಿಗೆ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸುವುದು ಸಾಮಾನ್ಯ. ಆದರೆ, ಇಲ್ಲಿ ಪ್ರಭಾವಿಗಳ ಲಾಭಕ್ಕಾಗಿ ಸ್ಥಳೀಯ ಅಧಿಕಾರಿಗಳು ಗ್ರಾಮದ ಸ್ಮಶಾನ ಎತ್ತಂಗಡಿಗೆ ಮುಂದಾಗಿದ್ದಾರೆ.

ಹೌದು! ಕುಪ್ಪಳ್ಳಿ ಗ್ರಾಪಂ ವ್ಯಾಪ್ತಿಯ ಈರೇನಹಳ್ಳಿ ಗ್ರಾಮಸ್ಥರು ಹಿಂದೆ ರುದ್ರಭೂಮಿಗಾಗಿ ಅಳಲು ತೋಡಿಕೊಳ್ಳುತ್ತಿದ್ದರು. ಆದರೆ, ಈಗ ಸ್ಮಶಾನ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ.

ನಂದಿ ಗಿರಿಧಾಮದ ತಪ್ಪಲಿನ ಈರೇನಹಳ್ಳಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಶೋಷಿತ ಮತ್ತು ಬಡ ವರ್ಗದವರು. ಇಲ್ಲಿ ಹಿಂದೆ ಸ್ಮಶಾನ ಇರಲಿಲ್ಲ. ಮೃತದೇಹದ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಗಂಟೆಗಟ್ಟಲೆ ಕಾಯುವುದು, ಪ್ರತಿಭಟನೆ ಮತ್ತು ಗಲಾಟೆ ಹೀಗೆ ನಾನಾ ಕಿರಿಕಿರಿ ಘಟನೆಗಳು ನಡೆಯುತ್ತಿದ್ದವು. 2017ರ ನ.21 ರಂದು ಮುನಿಶಾಮಪ್ಪ ಎಂಬುವರು ಮೃತಪಟ್ಟಾಗ ಜಾಗದ ಸಮಸ್ಯೆಯಿಂದಾಗಿ ಒಂದು ದಿನ ತಡವಾಗಿ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು. ಇದಕ್ಕೆ ಗ್ರಾಮಸ್ಥರು ಹೋರಾಟ ನಡೆಸಿದಾಗ ಸಮೀಪದ ಕುಡುವತಿಯ ಸರ್ವೆ ನಂ.171ರ ಎರಡು ಎಕರೆ ಸರ್ಕಾರಿ ಗೋಮಾಳ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಲಾಯಿತು. ಇದೀಗ ಇಲ್ಲಿ ನಾಲ್ಕೈದು ಸಮಾಧಿಗಳು ನಿರ್ವಣವಾಗಿವೆ. ಇದರ ನಡುವೆ ಬೇರೆ ಕಡೆ ಹೊಸದಾಗಿ ಸ್ಮಶಾನ ಗುರುತಿಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಬಡ ರೈತನ ಮೇಲೆ ಸವಾರಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಾಲಿ ಇರುವ ಸ್ಮಶಾನಕ್ಕೆ ಕಾಂಪೌಂಡ್ ನಿರ್ವಿುಸಲು ಗುಣಿ ಅಗೆಯಲಾಗಿದೆ. ಆದರೆ, ಪಕ್ಕದ ಜಮೀನಿನ ಮಾಲೀಕ, ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾವಕ್ಕೆ ಕೆಲಸ ನಿಲ್ಲಿಸಿದ್ದು, ಗ್ರಾಮದಿಂದ ಹೊರಗೆ ಬಡ ರೈತರೊಬ್ಬರು ಸಾಗುವಳಿ ಚೀಟಿಗೆ ಫಾರಂ 53ರ ಅರ್ಜಿ ಸಲ್ಲಿಸಿದ ಕೃಷಿ ಭೂಮಿಯ ಜಾಗಕ್ಕೆ ಸ್ಮಶಾನ ಸ್ಥಳಾಂತರಿಸಲು ಹುನ್ನಾರ ನಡೆಸಲಾಗಿದೆ. ಗ್ರಾಮಸ್ಥರ ಗಮನಕ್ಕೆ ತರದೆ ಹೊಸ ಕಡತವನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆಗೆ ಕಳುಹಿಸಲಾಗಿದೆ.

ಸ್ಮಶಾನ ಸ್ಥಳಾಂತರ ಬೇಡ: ಸ್ಥಳೀಯ ರೈತರಿಂದ ಎಕರೆಗಟ್ಟಲೇ ಜಮೀನು ಖರೀದಿಸಿರುವ ರಿಯಲ್ ಎಸ್ಟೇಟ್ ಉದ್ಯಮಿ ಸಮೀಪದ ಗೋಮಾಳ ಜಾಗದ ಒತ್ತುವರಿಗೆ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ. ಹಳೇ ಜಾಗದಲ್ಲಿ ಸಮಾಧಿಗಳಿರುವುದರಿಂದ ಯಾವುದೇ ಕಾರಣಕ್ಕೂ ಸ್ಮಶಾನ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿದ್ದಾರೆ.

ಒಂದು ವರ್ಷದ ಹಿಂದೆ ಅಧಿಕಾರಿಗಳು ಗುರುತಿಸಿದ ಸ್ಮಶಾನ ಜಾಗದಲ್ಲಿ ನಮ್ಮ ತಂದೆ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. ಈಗ ಸ್ಮಶಾನ ಜಾಗ ಬದಲಾಯಿಸುತ್ತಾರೆ ಎಂಬ ಮಾತಿನಿಂದ ಆತಂಕ ಉಂಟಾಗಿದೆ. ಹಳೇ ಜಾಗವನ್ನೇ ಸ್ಮಶಾನಕ್ಕೆ ಮೀಸಲಿಡಬೇಕು.

| ನಾರಾಯಣಮ್ಮ, ಈರೇನಹಳ್ಳಿ ಗ್ರಾಮಸ್ಥೆ

ರಿಯಲ್ ಎಸ್ಟೇಟ್ ಉದ್ಯಮಿಗೆ ಲಾಭ ಮಾಡಿಕೊಡಲು ಅಧಿಕಾರಿಗಳು ಸ್ಮಶಾನದ ತಂಟೆಗೆ ಹೋಗಿ, ಊರಿನ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಸ್ಮಶಾನ ಜಾಗ ಬದಲಾಯಿಸಿದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ.

| ಚೆನ್ನಪ್ಪ, ಈರೇನಹಳ್ಳಿ ಗ್ರಾಮಸ್ಥ

ಈರೇನಹಳ್ಳಿಯಲ್ಲಿ ಸ್ಮಶಾನವಿಲ್ಲದಿದ್ದಾಗ ನಾವೇ ಜಾಗವನ್ನು ಗುರುತಿಸಿ ಕೊಟ್ಟಿದ್ದೇವೆ. ವಿವಾದ ಕುರಿತು ಸಂಬಂಧಿಸಿದವರೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

| ಕೆ.ನರಸಿಂಹಮೂರ್ತಿ, ತಹಸೀಲ್ದಾರ್, ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *