ಸ್ಮಶಾನದಲ್ಲಿ ಕಾರ್ವಿುಕರಿಬ್ಬರು ಆತ್ಮಹತ್ಯೆ

ಶಿವಮೊಗ್ಗ: ಹೊಸನಗರ ಸಮೀಪದ ಮಾರಿಗುಡ್ಡದ ಸ್ಮಶಾನದಲ್ಲಿ ಅಕೇಶಿಯಾ ಮರವೊಂದರಕ್ಕೆ ಕೂಲಿ ಕಾರ್ವಿುಕರಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ಆರ್.ಕೆ.ರಸ್ತೆಯ ಶ್ರೀಕಾಂತ್(29) ಮತ್ತು ಗಂಗನಕೊಪ್ಪದ ಪ್ರಕಾಶ್ (31) ಆತ್ಮಹತ್ಯೆ ಮಾಡಿಕೊಂಡವರು.

ಗಾರೆ ಕೆಲಸ ಹಾಗೂ ಇತರ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇಬ್ಬರೂ ವಿಪರೀತ ಮದ್ಯ ವ್ಯಸನಿಗಳಾಗಿದ್ದರು. ಪ್ರತಿದಿನ ಕುಡಿದು ತಡವಾಗಿ ಮನೆಗೆ ಬರುತ್ತಿದ್ದರು. ಬುದ್ದಿವಾದ ಹೇಳಿದರೂ ಕೇಳುತ್ತಿರಲಿಲ್ಲ. ಬುಧವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋದವರು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ.

ಕೆಲವೊಮ್ಮೆ ಕುಡಿದು ಸ್ನೇಹಿತರ ಮನೆಯಲ್ಲೇ ಮಲಗುವ ಅಭ್ಯಾಸವನ್ನಿಟ್ಟುಕೊಂಡಿದ್ದ ಕಾರಣ ರಾತ್ರಿಯಾದರೂ ಮನೆಗೆ ಬಾರದಿದ್ದರೂ ಕುಟುಂಬ ಸದಸ್ಯರು ಆ ಬಗ್ಗೆ ಲಕ್ಷ್ಯ ವಹಿಸಲಿರಲಿಲ್ಲ. ಆದರೆ ಗುರುವಾರ ಬೆಳಗ್ಗೆ ಸ್ನೇಹಿತರ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹೊಸನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮೃತರ ಸಹೋದರರು ನೀಡಿದ ದೂರಿನ ಮೇರೆಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *