ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮುಂಚೂಣಿಯಲ್ಲಿ ಬೇಸ್

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಸಿಬಿಎಸ್​ಇ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಮತ್ತು ಜಾಯಿಂಟ್ ಎಂಟ್ರೆನ್ಸ್ ಟೆಸ್ಟ್ (ಜೆಇಇ), ರಾಷ್ಟ್ರೀಯ ಪ್ರತಿಭಾ ಶೋಧನಾ (ಎನ್​ಟಿಎಸ್​ಇ) ಮತ್ತಿತರ ಪರೀಕ್ಷೆಗಳಿಗೆ ತರಬೇತಿ ನೀಡುವಲ್ಲಿ ಬೇಸ್ ಸಂಸ್ಥೆ ಮುಂಚೂಣಿಯಲ್ಲಿದೆ.

ಇಂಜಿನಿಯರ್, ವೈದ್ಯರಾಗಬೇಕೆಂಬ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುತ್ತಿರುವ ಸಂಸ್ಥೆಗಳಲ್ಲಿ ಬೇಸ್ ಪಾತ್ರ ಪ್ರಮುಖವಾದದ್ದು. ಇಲ್ಲಿ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಇಂದು ಅಖಿಲ ಭಾರತ ಮಟ್ಟದಲ್ಲಿ ಏಮ್ಸ್​, ಐಐಟಿಗಳಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.

1991ರಲ್ಲಿ ಬೇಸ್ ಸಂಸ್ಥೆ ಪ್ರಾರಂಭವಾಯಿತು. ಪ್ರತಿ ವರ್ಷ ಅಂದಾಜು 5 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, 250 ನುರಿತ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಕ್ಲಾಸ್ ರೂಂ ಮತ್ತು ದೂರ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ.

ಹೊಸ ಬ್ಯಾಚ್

ಸೆಪ್ಟೆಂಬರ್​ನಿಂದ 2018ರ ಹೊಸ ಬ್ಯಾಚ್ ತರಗತಿಗಳು ಪ್ರಾರಂಭವಾಗಲಿದ್ದು, ಜನವರಿ 2019ರವರೆಗೆ ನಡೆಯಲಿವೆ. ದ್ವಿತೀಯ ಪಿಯು ಪರೀಕ್ಷೆ ನಂತರವೂ ಒಂದು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಕಾಲೇಜಿನ ಸಮಯಕ್ಕೆ ತೊಂದರೆಯಾಗದಂತೆ ಬೇಸ್ ವೇಳಾಪಟ್ಟಿ ರೂಪಿಸಿದ್ದು, ಸಂಜೆ 5.30ರಿಂದ 8.30ರವರೆಗೆ ತರಗತಿಗಳು ನಡೆಯಲಿವೆ.

ನಗರದಲ್ಲಿ 10 ಬೇಸ್ ಕೇಂದ್ರಗಳಿದ್ದು, ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂಥ ಕೇಂದ್ರಗಳಲ್ಲಿ ಪ್ರವೇಶ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜತೆಗೆ ಸ್ಟಡಿ ಮೆಟೀರಿಯಲ್ ಸಹ ನೀಡಲಿದೆ. 2018ರಲ್ಲಿ ಸಿಇಟಿ ಒಂದು ಸಾವಿರ ರ್ಯಾಂಕ್ ಒಳಗೆ 145 ವಿದ್ಯಾರ್ಥಿಗಳು ಬೇಸ್​ನಲ್ಲಿ ತರಬೇತಿ ಪಡೆದವರಾಗಿದ್ದಾರೆ. ಇದೇ ರೀತಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬೇಸ್​ನ 505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸ್ವ-ಅಧ್ಯಯನ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ವ-ಅಧ್ಯಯನ ಪ್ರಮುಖ ಪಾತ್ರ ವಹಿಸಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಿತ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತರಬೇತಿ ಹೊರತಾಗಿ ವಿದ್ಯಾರ್ಥಿಗಳು ಸ್ವ-ಅಧ್ಯಯನಕ್ಕೆ ಪ್ರತ್ಯೇಕ ವೇಳಾಪಟ್ಟಿ ರೂಪಿಸಿಕೊಳ್ಳುವುದು ಉತ್ತಮ.

ತರಬೇತಿಯಿಂದ ವಿದ್ಯಾರ್ಥಿಗಳಿಗಿರುವ ಲಾಭ
  1. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸ್ಪಷ್ಟತೆ ್ಝ ಸಾಮರ್ಥ್ಯದ ಸ್ವ ಪರೀಕ್ಷೆ
  2. ಬರವಣಿಗೆಯ ವೇಗ ಮತ್ತು ನಿಖರತೆ ಹೆಚ್ಚಿಸಲಿದೆ
  3. ಸಮಯ ನಿರ್ವಹಣೆ
  4. ಸಮಗ್ರ ಮನನ
  5. ಪ್ರಶ್ನೆಗಳನ್ನು ನಿರೀಕ್ಷೆ ಮಾಡುವುದು
ಸೂಕ್ತ ಮಾರ್ಗದರ್ಶನ

ಉತ್ತಮ ಕೋರ್ಸ್​ಗಳಲ್ಲಿ ಪ್ರವೇಶ ಪಡೆಯಬೇಕು ಎಂಬುದು ಬಹುತೇಕ ವಿದ್ಯಾರ್ಥಿಗಳ ಗುರಿ. ಆದರೆ, ಆ ಕೋರ್ಸ್​ಗಳ ಪ್ರವೇಶ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ತರಬೇತಿಯ ಮಾಹಿತಿ ಇರುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಮೂಲದಿಂದಲೇ ತರಬೇತಿ ನೀಡುವುದು, ಮಾರ್ಗದರ್ಶನ ನೀಡುವುದು, ಸರಣಿ ಪರೀಕ್ಷೆ ನಡೆಸಿ ವಿದ್ಯಾರ್ಥಿಯನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಕೆಲಸವನ್ನು ಬೇಸ್ ಮಾಡುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಸ್ಪರ್ಧಿಸಿ ಉತ್ತೀರ್ಣರಾಗುವುದು ತುಂಬ ವಿರಳ. ರಾಜ್ಯದ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಪರೀಕ್ಷೆ ಎದುರಿಸುವುದು ಸುಲಭದ ಮಾತಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಸಾಮರ್ಥ್ಯವಿದ್ದರೂ ಪರೀಕ್ಷೆಯ ಭಯ ಅವರನ್ನು ಕಾಡುತ್ತಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಹಿಂದೆ ಉಳಿಯುತ್ತಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ತಮ್ಮ ಗುರಿ ಸಾಧಿಸಲು ಬೇಕಾದ ಕೌಶಲ ಮತ್ತು ಜ್ಞಾನವನ್ನು ಬೇಸ್ ನೀಡುತ್ತಿದೆ.

Leave a Reply

Your email address will not be published. Required fields are marked *