ಸ್ಥಿರಬಿಂಬ ಪ್ರತಿಷ್ಠಾಪನೆ

ಕೊರಟಗೆರೆ: ವಡ್ಡಗೆರೆ ವೀರನಾಗಮ್ಮ ದೇವಸ್ಥಾನದಲ್ಲಿ ಭಾನುವಾರ ರಾಜಗೋಪುರ, ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳ ಉದ್ಘಾಟನೆ ಪ್ರಯುಕ್ತ ಧಾರ್ವಿುಕ ಕಾರ್ಯಕ್ರಮಗಳು ನೆರವೇರಿತು.

ಗುಡಿಕಟ್ಟು ಮತ್ತು ಗಾಡಿಕಟ್ಟುಗೆ ಸೇರಿರುವ ಗುರಮನೆ, ಕಟ್ಟೆಮನೆ, 12 ಅಮಾವಾಸ್ಯೆ ದೇವಸ್ಥಾನ, 33 ಬಂಡಿಗಳನ್ನು ಬರ ಮಾಡಿಕೊಂಡು ವಿಶೇಷ ಪೂಜೆಯೊಂದಿಗೆ ದೇವಾಲಯಗಳ ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ರಾಜಗೋಪುರ ಕಳಶಗಳ ಪ್ರತಿಷ್ಠಾನೆ, ಪ್ರಾಣ ಪ್ರತಿಷ್ಠಾಪನಾ ಹೋಮ, ಪ್ರದಾನ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಶಾಂತಿ ಹೋಮ ನಡೆಯಿತು.

ಇಂದಿನ ಕಾರ್ಯಕ್ರಮ: ಮುಜರಾಯಿ ಸಚಿವ ರಾಜಶೇಖರ್ ಬಸವರಾಜು ಪಾಟೀಲ್ ದೇವಾಲಯದ ಪ್ರಾಂಗಣ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸುವರು. ರಾಜ್ಯ ಸಭಾ ಸದಸ್ಯ ಬಿ.ಸಿ.ರಾಜಶೇಖರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯರಾದ ಬಿ.ಸತ್ಯನಾರಾಯಣ, ಕಾಂತರಾಜು, ಜಿಲ್ಲಾಧಿಕಾರಿ ರಾಕೇಶ್​ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಮಧುಗಿರಿ ಉಪವಿಭಾಧಿಕಾರಿ ಎಚ್.ಜಿ.ಚಂದ್ರಶೇಖರಯ್ಯ, ಜಿಪಂ ಅಧ್ಯಕ್ಷ ಲತಾ ರವಿಕುಮಾರ್, ತಮಿಳುನಾಡು, ಆಂಧ್ರಪ್ರದೇಶದ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.