ಸ್ಥಳೀಯ ರಂಗಾಸಕ್ತರಿಗೆ ವೇದಿಕೆ

blank

 ಕಲಬುರಗಿ: ಸ್ಥಳೀಯ ಕಲಾವಿದರು ಮತ್ತು ರಂಗಾಸಕ್ತರು ಹಾಗೂ ಹವ್ಯಾಸಿ ಕಲಾವಿದರನ್ನು ಸಮರ್ಪಕವಾಗಿ ಬಳಸಿಕೊಂಡು ವಿನೂತನ ರಂಗ ಪ್ರಯೋಗ ಮಾಡಲಾಗುವುದು. ಶೀಘ್ರವೇ ಕಾಯಂ ಕಲಾವಿದರ ನೇಮಕ ಮಾಡಲಾಗುವುದು ಎಂದು ಕಲಬುರಗಿ ರಂಗಾಯಣ ನೂತನ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.
ನಿರ್ದೇಶಕರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡ ಅವರು ರಂಗಾಯಣ ಕಚೇರಿಯಲ್ಲಿ ಬುಧವಾರ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಜತೆ ಸುದ್ದಿಗೋಷ್ಠಿ ನಡೆಸಿ, ಗ್ರಾಮೀಣ ಭಾಗದ ಹಬ್ಬ, ಜಾತ್ರೋತ್ಸವ ವೇಳೆ ಸಂಭ್ರಮಕ್ಕೆ ರಂಗಾಯಣ ಸ್ಥಳೀಯರಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡಲಿದೆ ಎಂದು ಪ್ರಕಟಿಸಿದರು.
ಉದಾತ್ತ ವಿಚಾರಗಳನ್ನು ಒಳಗೊಂಡ ನೂತನ ರಂಗ ಪ್ರಯೋಗಗಳ ಮೂಲಕ ರಂಗಾಯಣವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಾಗುವುದು. ತಂತ್ರಜ್ಞರು ಸೇರಿ ಕನಿಷ್ಠ 15 ಕಲಾವಿದರು ರಂಗಾಯಣದಲ್ಲಿ ಇರಲಿದ್ದು, ಶೀಘ್ರವೇ ನೇಮಿಸಲಾಗುವುದು. ಹಿಂದಿನ ಕಲಾವಿದರಿಗೆ ಅವಕಾಶ ಮತ್ತು ಅವರ ಬಾಕಿ ವೇತನ ನೀಡಲು ರಂಗಸಮಾಜ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಹೊಸದಾಗಿ ಕಲಾವಿದರನ್ನು ನೇಮಕ ಮಾಡಿಕೊಂಡ ಬಳಿಕ ತರಬೇತಿ ನೀಡಿ ರಂಗ ಪ್ರಯೋಗ ನಡೆಸಲಾಗುವುದು. ಸಂಚಾರ ತಂಡಗಳಾಗಿ ರೂಪಿಸಿ ನಾಡಿನ ಬೇರೆ ಬೇರೆ ಕಡೆ ನಾಟಕ ಪ್ರದರ್ಶನಕ್ಕೆ ಕಾರ್ಯಯೋಜನೆ ಹಾಕಿಕೊಳ್ಳುವುದಾಗಿ ಜೋಶಿ ತಿಳಿಸಿದರು.
ರಾಜ್ಯದ ನಾಲ್ಕು ರಂಗಾಯಣ ಪೈಕಿ ಇಲ್ಲಿನ ರಂಗಾಯಣ ಮೇಲೆ ರಂಗ ಸಂಗಾತಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಂತೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ರಂಗಾಯಣವನ್ನು ಪ್ರೀತಿಸಿ ಪ್ರೋತ್ಸಾಹಿಸುವ ಸಹೃದಯಿಗಳು, ರಂಗ ಚಟುವಟಿಕೆ ಗಮನಿಸಿ ಲೋಪ ಕಂಡುಬಂದಲ್ಲಿ ಸಲಹೆ ನೀಡಬೇಕು. ಹಿರಿಯ ರಂಗಕರ್ಮಿಗಳು, ರಂಗಕಲಾವಿದರು ಯಾವಾಗ ಬೇಕಾದರೂ ಸಲಹೆ-ಅಭಿಪ್ರಾಯ ನೀಡಬಹುದು ಎಂದರು.
ರಂಗಾಯಣ ಜನ್ಮತಳೆಯಲು ಕಾರಣರಾದ ಡಾ.ಬಿ.ವಿ. ಕಾರಂತ ಕನಸು ನನಸಾಗಿಸಲು ಪ್ರಯತ್ನಿಸುತ್ತೇನೆ. ರಂಗಾಯಣದ ಆಧುನಿಕ ಶೈಲಿಯ ಹೊಸ ಅಲೆ ನಾಟಕಗಳಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಪ್ರದರ್ಶಿತವಾಗುವ ಹವ್ಯಾಸಿ ನಾಟಕಗಳಿಗಿದ್ದಷ್ಟು ಪ್ರೇಕ್ಷಕರು, ಹೊಸ ಅಲೆ ನಾಟಕಗಳಿಗೆ ಇರಲ್ಲ. ಹೀಗಾಗಿ ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ರಂಗಾಯಣ ಕಡೆಗೆ ಆಕರ್ಷಿಸಲಾಗುವುದು ಎಂದು ಹೇಳಿದರು.
ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಇದ್ದರು. 

ಕಲಬುರಗಿ ರಂಗೋತ್ಸವ
ರಂಗಾಯಣದಿಂದ ಮುಂದಿನ ದಿನಗಳಲ್ಲಿ ಕಲಬುರಗಿ ರಂಗೋತ್ಸವ ಮಾಡಲಾಗುವುದು ಎಂದು ನೂತನ ನಿರ್ದೇಶಕ ಪ್ರಭಾಕರ ಜೋಶಿ ಪ್ರಕಟಿಸಿದರು. ಅದಕ್ಕೆ ರೂಪುರೇಷೆ ಸಿದ್ಧಪಡಿಸಲಾಗುವುದು. ಶೀಘ್ರವೇ ಆಡಳಿತಾಧಿಕಾರಿಗಳ ಜತೆ ಚರ್ಚಿಸಿ ಮೊದಲ ವರ್ಷದ ಕಾರ್ಯಯೋಜನೆ ರೂಪಿಸಲಾಗುವುದು. ಸದ್ಯ ಸರ್ಕಾರ ನೀಡುತ್ತಿರುವ ಅನುದಾನವೇ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಒಂದು ಕೋಟಿ ರೂ. ಸಾಕು. ಅಗತ್ಯಬಿದ್ದಲ್ಲಿ ವಿಶೇಷ ಪ್ರಸ್ತಾವನೆ ಸಲ್ಲಿಸಿ ಪಡೆದುಕೊಳ್ಳಲಾಗುವುದು. ನಾಟಕಗಳ ಪ್ರಯೋಗ ಕಾಲಕ್ಕೆ 15ಕ್ಕೂ ಹೆಚ್ಚಿನ ಕಲಾವಿದರು ಬೇಕು ಎನಿಸಿದ್ದಲ್ಲಿ ಹೊರಗುತ್ತಿಗೆ ಮೇಲೆ ನಿಯೋಜನೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಸನ್ಮಾನಗಳ ಸುರಿಮಳೆ
ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರನ್ನು ಕಲಾವಿದರು, ಸಾಹಿತಿಗಳು, ರಂಗಾಸಕ್ತರು, ಪತ್ರಕರ್ತರು ಸೇರಿ ಅನೇಕರು ಸನ್ಮಾನಿಸಿದರು. ಸ್ವಾಮಿರಾವ ಕುಲಕರ್ಣಿ, ಶ್ರೀನಿವಾಸ ಸಿರನೂರಕರ್, ಸುಬ್ರಾವ್ ಕುಲಕರ್ಣಿ , ಲಕ್ಷ್ಮೀಶಂಕರ ಜೋಶಿ, ವಿ.ಜಿ.ದೇಸಾಯಿ, ಬಸವರಾಜ ಕೊನೇಕ್, ಶಿವರಾಜ ಪಾಟೀಲ್, ಡಾ.ಸುಜಾತಾ ಜಂಗಮಶೆಟ್ಟಿ, ಶಂಕ್ರಯ್ಯ ಘಂಟಿ, ಎಂ.ಬಿ. ಅಂಬಲಗಿ, ಮಹಿಪಾಲರೆಡ್ಡಿ ಮುನ್ನೂರ್, ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ, ಡಾ.ಚಿ.ಸಿ. ಲಿಂಗಣ್ಣ, ಶಂಕರ ಬಿರಾದಾರ, ರಾಧಾಕೃಷ್ಣ ಕುಲಕರ್ಣಿ ಇತರರು ಸನ್ಮಾನಿಸಿದರು.

blank
Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…