ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗಳನ್ನು ಗೆಲ್ಲಿಸಿ

ಬಸವಕಲ್ಯಾಣ: ಜೆಡಿಎಸ್ ಪಕ್ಷಕ್ಕೆ ತನ್ನದೇ ಸಿದ್ಧಾಂತ ಮತ್ತು ದೂರದೃಷ್ಟಿ ಇದೆ. ನಗರದ ಅಭಿವೃದ್ಧಿಗಾಗಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ನ ಎಲ್ಲ ಅಭ್ಯರ್ಥಿಗಳನ್ನುಬೆಂಬಲಿಸಿ, ಗೆಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಮನವಿ ಮಾಡಿದರು.
ಪಟ್ಟಣದ ಕ್ರಿಸ್ಟಲ್ ಫಂಕ್ಷನ್ ಹಾಲ್ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಜೆಡಿಎಸ್ನ ನಗರಸಭೆ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪರ ಆಡಳಿತ ಮತ್ತು ಯೋಜನೆಗಳನ್ನು ಮನೆ-ಮನೆಗೂ ತಿಳಿಸಿ, ಪಕ್ಷದ ಅಭ್ಯರ್ಥಿಗಳನ್ನು ಕಾರ್ಯಕರ್ತರು ಗೆಲ್ಲಿಸಿಕೊಂಡು ಬರಬೇಕು. ವಾರ್ಡ್​ಗೆ ಒಬ್ಬ ಉಸ್ತುವಾರಿಯನ್ನು ನೇಮಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಂ.ಜಿ.ಮುಳೆ ಮಾತನಾಡಿ, ಅಭಿವೃದ್ಧಿ ಜತೆಗೆ ಶಾಂತಿ-ಸೌಹಾರ್ದತೆ ಗಟ್ಟಿಗೊಳಿಸಲು ಜೆಡಿಎಸ್ ಬೆಂಬಲಿಸಿ. ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸೇವೆ ಮಾಡಲೂ ಅವಕಾಶ ಕೊಡಬೇಕು ಎಂದರು.
ಮುಖಂಡ ನಸೀಮ ಪಟೇಲ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶಪ್ಪ ಬಿರಾದಾರ ಮಾತನಾಡಿದರು. ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೊಲ್ಲಾಪುರ, ಪ್ರಮುಖರಾದ ಮಾರುತಿ ಬೌದ್ಧೆ, ಜಿಪಂ ಸದಸ್ಯ ಆನಂದ ಪಾಟೀಲ್, ಮಾಧವರಾವ ಹಾಸೂರೆ, ನಗರಸಭೆ ಮಾಜಿ ಅಧ್ಯಕ್ಷ ರಾಜು ಸುಗರೆ, ಬಂಡೆಪ್ಪ ಮೇತ್ರೆ, ಜಿಪಂ ಮಾಜಿ ಉಪಾಧ್ಯಕ್ಷೆ ಅನ್ನಪೂರ್ಣ ಅಂಬಾರಾಯ, ಮಹಿಳಾ ಘಟಕದ ಅಧ್ಯಕ್ಷೆ ಸಂತೋಷಿ ದಾದೆ, ಅಭ್ಯಥರ್ಿಗಳಾದ ಎ.ಜಿ. ಪಾಟೀಲ್, ಇಸ್ಮಾಯಿಲ್ ಬೆಳಕೋಣಿ, ಕರುಣಾದೇವಿ, ಸಂಗಮ್ಮ ರೊಂಟೆ, ಅಬ್ದುಲ್ ರಜಾಕ್ ಚೌದರಿ, ಬಸವರಾಜ ಇದ್ದರು.

Leave a Reply

Your email address will not be published. Required fields are marked *