ಭಾಲ್ಕಿ: ಹನ್ನೆರಡನೇ ಶತಮಾನದ ಶರಣೆ ಅಕ್ಕಮಹಾದೇವಿ ಇಂದಿನ ಆಧುನಿಕ ಕಾಲದ ಸ್ತ್ರೀಕುಲಕ್ಕೆ ಸ್ಪೂರ್ತಿಯ ಸೆಲೆ ಮತ್ತು ಹೊಸ ಬೆಳಕು ಎಂದು ಚಿಕ್ಕಮಗಳೂರಿನ ಜಿ.ವಿ.ಮಂಜುನಾಥ ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಕದಳಿ ವಸತಿ ವಿಭಾಗದ ಎದುರಿನ ಅಕ್ಕಮಹಾದೇವಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಕ್ಕ ಮಹಾದೇವಿ ಸಾಮಾನ್ಯ ಮಹಿಳೆ ಆಗಿರಲಿಲ್ಲ. ಅವರು ಮಹಿಳಾ ಸ್ವಾತಂತ್ರ್ಯಮತ್ತು ಅಭಿವ್ಯಕ್ತಿ ಸಂಸ್ಕೃತಿಯ ಸಂಕೇತ. ಅವರು ತೋರಿದ ದಾರಿಯಲ್ಲಿ ಎಲ್ಲರೂ ಸಾಗಬೇಕು ಎಂದರು.
ಕದಳಿ ವಸತಿ ವಿಭಾಗದ ಮುಖ್ಯಸ್ಥೆ ಪ್ರೇಮಾ, ಇಂದುಮತಿ ತಂಡದವರು ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು. ಚನ್ನಬಸವೇಶ್ವರ ಪ್ರೌಢ ಶಾಲೆಯ ಮುಖ್ಯಗುರು ಮಹೇಶ ಮಹಾರಾಜ, ಪ್ರಾಥಮಿಕ ವಿಭಾಗದ ಮುಖ್ಯಗುರು ಮಹೇಶ ಕುಲಕರ್ಣಿ, ದತ್ತು ಕೇಂದ್ರದ ಮುಖ್ಯಸ್ಥ ಅನಿಲಕುಮಾರ ಹಾಲಕೂಡೆ, ದೈಹಿಕ ನಿರ್ದೇಶಕ ಅನಿಲಕುಮಾರ ಪಾಟೀಲ್ ಇತರರಿದ್ದರು.
ವಿದ್ಯಾರ್ಥಿನಿ ಸಾನ್ವಿ ವಿಜಯಕುಮಾರ ವಚನ ಗಾಯನ ನಡೆಸಿಕೊಟ್ಟರು. ಸಿಬಿಎಸ್‌ಇ ವಿದ್ಯಾರ್ಥಿನಿ ಪಿಯುಷಾ ನಿರೂಪಣೆ ಮಾಡಿದರು.